ಕಲ್ಲಡ್ಕ

ರೈತರ ಸಮಸ್ಯೆ ಬಗೆಹರಿಸಲು ಸ್ಪೀಕರ್ ಗೆ ರೈತಸಂಘ ಮನವಿ

ಬಂಟ್ವಾಳ ತಾಲೂಕಿನ ತುಂಬೆ ಡ್ಯಾಮ್ ನಿರ್ಮಾಣದ ಸವಕಳಿ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ, ವರತೆ ಪ್ರದೇಶಕ್ಕೆ ಪರಿಹಾರ ಸಹಿತ ನಾನಾ ಬೇಡಿಕೆಗಳು ಇರುವ ಮನವಿಯೊಂದನ್ನು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ರೈತಸಂಘ ಹಸಿರುಸೇನೆ ನೀಡಿತು. ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ನೇತೃತ್ವದ ನಿಯೋಗ ಸ್ಪೀಕರ್ ಭೇಟಿಗೆ ತೆರಳಿತ್ತು.

ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಮಣ್ಯ ಭಟ್  ಕಾರ್ಯದರ್ಶಿಕೆ ಇದಿನಬ್ಬ, ಭಾಸ್ಕರ, ಮೊಯ್ದಿನಬ್ಬ, ಲೋಕಯ್ಯ,  ದಿಲೀಪ್ ರೈ, ಸವಿತಾ, ದೇವಕಿ, ಪುರುಷೋತ್ತಮ, ಗಂಗಾಧರ ಮೊದಲಾದವರಿದ್ದರು.. ತುಂಬೆ ಡ್ಯಾಮ್ ನಿರ್ಮಾಣದಿಂದ ಸವಕಳಿ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ, ವರತೆ ಪ್ರದೇಶಕ್ಕೆ ಪರಿಹಾರ, ನದೀತೀರದ ಪಂಪಸೆಟ್ ಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಆದೇಶ ರದ್ದತಿ, ಕುಮ್ಕಿ ಹಕ್ಕಿನ ಬಗ್ಗೆ ಲಿಖಿತ ಮನವಿ ಸಲ್ಲಿಸಲಾಯಿತು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ