ಬಂಟ್ವಾಳ: ವಿಜಯೋತ್ಸವವನ್ನು ಆಚರಿಸುವ ಬದಲು ಸಂಕಷ್ಟದಲ್ಲಿರುವ ಹಾಗೂ ಇತ್ತೀಚೆಗೆ ಮೃತಪಟ್ಟ ಬಿಜೆಪಿಯ ನಾಲ್ಕು ಕಾರ್ಯಕರ್ತರ ಕುಟುಂಬಗಳಿಗೆ ನೆರವಾಗುವ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ (RAJESH NAIK BANTWAL MLA) ಅವರು ಗಮನ ಸೆಳೆದಿದ್ದಾರೆ.
ನಾನಾ ಕಾರಣಗಳಿಂದ ಬಿಜೆಪಿ ಕಾರ್ಯಕರ್ತರು ನಮ್ಮನ್ನಗಲಿದ್ದು, ಆಘಾತ ತಂದಿದ್ದು, ಇವರ ಕುಟುಂಬಕ್ಕೆ ಪಕ್ಷದ ವತಿಯಿಂದ ಸಹಾಯವಾಗುವ ನಿಟ್ಟಿನಲ್ಲಿ ಶಾಸಕರ ಕಚೇರಿ ಉದ್ಘಾಟನಾ ದಿನದಂದು ವಿಜಯೋತ್ಸವವನ್ನು ರದ್ದುಪಡಿಸಿ, ಪ್ರತಿಯೊಂದು ಕುಟುಂಬಕ್ಕೂ ತಲಾ 2 ಲಕ್ಷ ರೂಗಳನ್ನು ಶಾಸಕ ರಾಜೇಶ್ ನಾಯ್ಕ್ ವಿತರಿಸಿದರು. ಜನಾರ್ಧನ ಬಾರಿಂಜೆ, ಪ್ರವೀಣ್ ನಾಯಕ್, ನಿತಿನ್ ಯಾನೆ ರೂಪೇಶ್ ಪೂಜಾರಿ, ವಿಜಿತ್ ಗುರುವಾಯನಕೆರೆ ಅವರ ಕುಟುಂಬಕ್ಕೆ ಶಾಸಕರು ನೆರವು ನೀಡಿದ್ದಾರೆ.
ಪ್ರಮುಖರಾದ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಸುಲೋಚನ ಜಿ.ಕೆ.ಭಟ್, ಮಾದವ ಮಾವೆ, ಸುದರ್ಶನ ಬಜ ,ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ, ಸತೀಶ್ ಪೂಜಾರಿ, ವಾಮನ ಆಚಾರ್ಯ, ಅಜಿತ್ ಶೆಟ್ಟಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಯಶೋಧರ ಕರ್ಬೆಟ್ಟು, ಅಭಿಷೇಕ್ ಶೆಟ್ಟಿ ಗೋಳ್ತಮಜಲು, ಅಭಿಷೇಕ್ ಸುವರ್ಣ, ಸಂತೋಷ್ ಕುಲಾಲ್, ಕಾರ್ತಿಕ್ ಬಲ್ಲಾಳ್,ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ರಾಜಾರಾಂ ನಾಯಕ್, ಜಯಲಕ್ಮೀ ಕಾವಳಮೂಡೂರು, ರಾಜ್ ಗೋಪಾಲ ಪ್ರಭು, ಪ್ರಶಾಂತ್ ಕೆಂಪುಗುಡ್ಡೆ, ಪ್ರಕಾಶ್ ಅಂಚನ್, ಹರೀಶ್ ಪ್ರಭು, ರವಿ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)