ಪುತ್ತೂರು: “ಪುತ್ತೂರಿನ ಐಟಿ ಕಂಪನಿ” ಎಂದು ಜನಪ್ರಿಯವಾಗಿರುವ ಪ್ರಮುಖ ವೆಬ್‌ಸೈಟ್ ಹಾಗೂ ಆ್ಯಪ್ ಡೆವಲಪ್‌ಮೆಂಟ್ ಏಜೆನ್ಸಿ, ದ ವೆಬ್ ಪೀಪಲ್® (THEWEBPEOPLE) ಇತ್ತೀಚೆಗೆ ತುಳು ಲಿಪಿಯಿಂದ ಅಲಂಕರಿಸಲ್ಪಟ್ಟ ಹೊಚ್ಚಹೊಸ ನಾಮ ಫಲಕವನ್ನು ಅನಾವರಣಗೊಳಿಸಿತು.
(TULU) ತುಳು ಸಂಪ್ರದಾಯದ ಕ್ಯಾಲೆಂಡರ್ ಪ್ರಕಾರ, ಬೇಶ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಸ್ಥಳೀಯ ಸಂಸ್ಕೃತಿಯೊಂದಿಗೆ ಆಳವಾದ ಬೇರೂರಿರುವ ಸಂಪರ್ಕವನ್ನು ಪ್ರದರ್ಶಿಸಲು ದ ವೆಬ್ ಪೀಪಲ್® ಈ ಶುಭ ಸಮಯವನ್ನು ಆರಿಸಿಕೊಂಡರು. ಪುತ್ತೂರಿನ ಬೊಳ್ವಾರ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರದರ್ಶಿಸಲಾದ ತುಳು ಲಿಪಿ ಫಲಕವು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕಂಪನಿಯ ಬದ್ಧತೆಯನ್ನು ಸಂಕೇತಿಸುತ್ತದೆ.
“ತುಳು ಭಾಷೆಯು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಅದರ ವಿಶಿಷ್ಟ ಲಿಪಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದಾಗ ಜನರ ಗಮನ ಸೆಳೆದು ಅದರ ಬಗ್ಗೆ ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ಈ ನಡೆ ತುಳು ಲಿಪಿಯನ್ನು ಮತ್ತೆ ಜೀವಂತಗೊಳಿಸಲು ಕಾರಣಕರ್ತರಾದ ನನ್ನ ಅಜ್ಜ, ದಿ| ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರಿಗೆ ಗೌರವವಾಗಿದೆ.” ಎಂದು ಆದಿತ್ಯ ಕಲ್ಲೂರಾಯ, ಸ್ಥಾಪಕರು ಹಾಗೂ ಸಿಇಒ, ದ ವೆಬ್ ಪೀಪಲ್® ಹೇಳಿದರು.
“ತುಳು ಲಿಪಿಯ ಬಳಕೆಯನ್ನು ಕಲಿಯಲು ಮತ್ತು ಹರಡಲು ಹೆಚ್ಚಿನ ವ್ಯಕ್ತಿಗಳು ಮುಂದಾಗಬೇಕು” ಎಂದು ದ ವೆಬ್ ಪೀಪಲ್® ಸ್ಥಾಪಕರು ಹಾಗೂ ಸಿಒಒ, ಶರತ್ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ದ ವೆಬ್ ಪೀಪಲ್® ಆನ್‌ಲೈನ್ ಉಪಸ್ಥಿತಿಯನ್ನು ಸ್ಥಾಪಿಸಲು ಬಯಸುವ ವ್ಯವಹಾರಗಳಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಖ್ಯಾತಿಯನ್ನು ಗಳಿಸಿದೆ. ವೆಬ್‌ಸೈಟ್ UI/UX ವಿನ್ಯಾಸ, ವೆಬ್ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳು, ವಿನ್ಯಾಸ, ಬ್ರ್ಯಾಂಡಿಂಗ್ ಹಾಗೂ ಆನ್‌ಲೈನ್ ಉಪಸ್ಥಿತಿ ಮತ್ತು ಜಾಹೀರಾತು ಸೇರಿದಂತೆ ತಮ್ಮ ವ್ಯಾಪಕ ಶ್ರೇಣಿಯ ಸೇವೆಗಳೊಂದಿಗೆ, 200ಕ್ಕೂ ಅಧಿಕ ಕ್ಲೈಂಟ್‌ಗಳಿಗೆ ಯಶಸ್ವಿಯಾಗಿ ಸೇವೆ ಸಲ್ಲಿಸಿದೆ.