ಬಂಟ್ವಾಳ : ನನ್ನ ಅಧಿಕಾರಾವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿನ ಮೆಟ್ಟಿಲು. ನನ್ನ ಅವಧಿ ಹಾಗೂ ಕಳೆದ ಐದು ವರ್ಷದ ಇನ್ನೊಬ್ಬರ ಅಧಿಕಾರವಧಿಯನ್ನು ಜನ ತುಲನೆ ಮಾಡಿ ಈ ಬಾರಿ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಹೇಳಿದರು.
ಬರಿಮಾರ್ ಗ್ರಾಮದಲ್ಲಿ ಭಾನುವಾರ ಮನೆಮನೆ ಭೇಟಿ ಮಾಡಿ ಮತಯಾಚನೆ ಮಾಡಿದ ಸಂದರ್ಭ ಅವರು ಮಾತನಾಡಿದರು. ಬಂಟ್ವಾಳ ತಾಲೂಕಿನಾದ್ಯಂತ ಬಹುತೇಕ ಪ್ರಗತಿ ಕಾರ್ಯಗಳು ನನ್ನ ಆಡಳಿತ ಅವಧಿಯಲ್ಲೇ ನಡೆದಿವೆ. ಬಿ.ಸಿ. ರೋಡ್ ನಲ್ಲಿರುವ ತಾಲೂಕು ಆಡಳಿತ ಕಚೇರಿಯಾದ ಮಿನಿವಿಧಾನಸೌಧ, ಬಿ.ಸಿ. ರೋಡ್ ನಲ್ಲಿರುವ ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಪ್ರವಾಸಿ ಬಂಗ್ಲೆ, ಅಂಬೇಡ್ಕರ್ ಭವನ ಮುಂತಾದ ಹಲವು ಆಡಳಿತಾತ್ಮಕ ಕಚೇರಿಗಳು ತಮ್ಮ ಅವಧಿಯಲ್ಲಿ ನಿರ್ಮಿಸಲಾಗಿದೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ನಿವೇಶನ ಹಂಚಿಕೆ, ಮನೆ ನಿರ್ಮಾಣ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಆರೋಗ್ಯ ಕೇಂದ್ರಗಳನ್ನೂ ದೊಡ್ಡ ಮೊತ್ತದ ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದು ಅವರು ಈ ವೇಳೆ ಸ್ಮರಿಸಿದರು.
ಆದರೆ ಕಳೆದ ಐದು ವರ್ಷಗಳಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನ ತಮ್ಮನ್ನು ಗೆಲ್ಲಿಸುವುದಿಲ್ಲ ಎಂದು ಅರಿತಿರುವ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚು ಅಪಪ್ರಚಾರದಲ್ಲಿ ನಿರತವಾಗಿದೆ. ಆದರೆ, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಜನ ಈ ಬಾರಿ ಕಾಂಗ್ರೆಸ್ ಅನ್ನು ಭಾರೀ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ರೈ ಭರವಸೆ ವ್ಯಕ್ತಪಡಿಸಿದರು.ಈ ವೇಳೆ ಕೆ.ಪಿ.ಸಿ.ಸಿ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿದ್ದಕಟ್ಟೆ ಚರ್ಚ್‍ನಲ್ಲಿ ಪ್ರಾರ್ಥನೆ : ಚುನಾವಣಾ ಪ್ರಚಾರದ ನಡುವೆ ರಮಾನಾಥ ರೈ ಅವರು ಸಿದ್ದಕಟ್ಟೆಯ ಸಂತ ಪ್ಯಾಟ್ರಿಕ್ ಚರ್ಚ್‍ಗೆ ಭಾನುವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಪ್ರಾರ್ಥಿಸಿದರು. ಈ ವೇಳೆ ಕೆ.ಪಿ.ಸಿ.ಸಿ. ಸದಸ್ಯ ಪಿಯೂಸ್ ಎಲ್. ರಾಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುದೀಪ್ ಕುಮಾರ್ ಶೆಟ್ಟಿ, ಫಾ.ಡೇನಿಯಲ್ ಡಿಸೋಜ,ಕೆ. ಪಾವ್ಲ್ ಲೋಬೊ,ರೋಶನ್ ಡೇಸಾ,ಪ್ರವೀಣ್ ಕ್ರಾಸ್ತಾ,ಫಿಲಿಪ್ ಮೀನೆಜಸ್,ಸoತೋಷ್ ಮೊರಸ್,ಮೈಕಲ್ ಮೊರಸ್,ಆoತೋನಿ ಡಿಸೋಜ,ಪ್ರೀಮಲ್ ಬರೆಟ್ಟೊ,ರೀಟಾ ಮೀನೆಜಸ್,ಜೇಸನ್ ಫೆರ್ನಾ ಡೆಸ್, ಬೇಬಿ ಕುಂದರ್, ಚಂದ್ರ ಪ್ರಕಾಶ್ ಶೆಟ್ಟಿ,ಅಶೋಕ ಪೂಜಾರಿ ವಲಯ ಅಧ್ಯಕ್ಷರು,ವಸಂತ ಪೂಜಾರಿ,ಗಂಗಯ್ಯ ಪೂಜಾರಿ,ಅಶ್ವಿನ್ ಸಿಕ್ವೇರಾ,ಮ್ಯಾಕ್ಸಿಮ್ ಸಿಕ್ವೇರಾ,ಅರ್ವೀನ್ ಪಿಂಟೋ,ಜಯಕರ ಶೆಟ್ಟಿ, ಮೊಹಮ್ಮದ್ ಝುಬಿ,ಮೈಕಲ್ ಮೆಲ್ಡ್ರಿಸ್,ಕೇಶವ ಪೂಜಾರಿ,ಜಗದೀಶ್ ಜೈನ್ ಉಪಸ್ಥಿತರಿದ್ದರು.
ADVERTISMENT