Categories: ಬಂಟ್ವಾಳ

ಬಿಜೆಪಿ ಶಕ್ತಿ ಕೇಂದ್ರಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ: ಕಾರ್ಯಕರ್ತರೊಂದಿಗೆ ಮಾತುಕತೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ವಿವಿಧೆಡೆ ಬಿಜೆಪಿ ಶಕ್ತಿಕೇಂದ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ರಾಯಿ, ದೇವಸ್ಯಪಡೂರು, ಮಣಿನಾಲ್ಕೂರು, ನಾವೂರು, ಕರಿಂಗಾಣ, ನರಿಕೊಂಬು, ಸಜಿಪಮುನ್ನೂರು, ಕಡೇಶಿವಾಲಯ ಮತ್ತು ಶಂಭೂರುಗಳಲ್ಲಿ ನಡೆದ ಸಭೆಗಳ ಚಿತ್ರ /ವಿವರ ಇಲ್ಲಿದೆ.

ಬಂಟ್ವಾಳ: ಚುನಾವಣೆಯವರೆಗೆ ವಿರಮಿಸದೆ ಶಕ್ತಿ ಮೀರಿ ಕೆಲಸಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದರು.ರಾಯಿ ಶಕ್ತಿ ಕೇಂದ್ರದ ಸಂತೋಷ್ ಗೋಳಿತೊಟ್ಟು ಮನೆಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಯಿ ಬಿಜೆಪಿಗೆ ಶಕ್ತಿ ನೀಡುವ ಗ್ರಾಮವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಅಧಿಕ ಮತಗಳನ್ನು ನೀಡಿ ಬಂಟ್ವಾಳ ಕ್ಷೇತ್ರದ ಮಹತ್ತರವಾದ ಅಭಿವೃದ್ಧಿಗೆ ಕಾರಣರಾಗುವಂತೆ ಅವರು ಮನವಿ ಮಾಡಿದರು.ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರದ ಸಮಿತ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ರಮನಾಥ ರಾಯಿ, ಮಹಾಶಕ್ತಿ  ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಗ್ರಾಮಪಂಚಾಯತ್ ಅಧ್ಯಕ್ಷೆ ರತ್ನ, ಸದಸ್ಯರಾದ ಸಂತೋಷ್ ರಾಯಿಬೆಟ್ಟು, ಉಷಾ ಸಂತೋಷ್, ಯಶೋಧ,  ಬೂತ್ ಅಧ್ಯಕ್ಷರಾದ ಸಂತೋಷ್ ಗೋಳಿತ್ತಬೆಟ್ಟು, ಶಿವಪ್ರಸಾದ್, ಶಕ್ತಿ ಕೇಂದ್ರದ ಪ್ರಮುಖ್ ಮದುಕರ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಶಂಭೂರು ಮಹಾಶಕ್ತಿ ಕೇಂದ್ರದಲ್ಲಿ ಶಾಸಕ ರಾಜೇಶ್ ನಾಯ್ಕ್ ಸಭೆ

ಕಳೆದ 30 ವರ್ಷಗಳಲ್ಲಿ ಆಗದೆ ಬಾಕಿಯಾಗಿದ್ದ ಗ್ರಾಮಗಳ ಪ್ರತಿ ಸಮಸ್ಯೆಗಳನ್ನು ಬಗೆಹರಿಸಲು ಐದು ವರ್ಷಗಳಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದು, ಜನರಿಗೆ ತೃಪ್ತಿ ತಂದಿದೆ ಎಂಬ ವಿಶ್ವಾಸ ನನಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಶಂಭೂರು ಮಹಾಶಕ್ತಿ ಕೇಂದ್ರದ ಕೇಶವ ಎಂಬವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿ ಮಂಡಲದ ಅದ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಶಂಭೂರು ಗ್ರಾಮದ ಅನೇಕ ವರ್ಷಗಳ ಬೇಡಿಕೆಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಈಡೇರಿಸುವ ಕೆಲಸ ಮಾಡಿದ್ದಾರೆ, ಅವರ ಮುಂದಿನ ಚುನಾವಣೆಯಲ್ಲಿ ಮತ್ತೆ ಅವರನ್ನು ಅಧಿಕ ಅಂತರದ  ಮತದಾನಗಳಿಂದ ಜಯಗಳಿಸಲು ಬೆಂಬಲ ನೀಡಲು ಮನವಿ ಮಾಡಿದರು.ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಆನಂದ ಶಂಭೂರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಕ್ಷೇತ್ರದ ಯುವಮೋರ್ಚಾದ ಅದ್ಯಕ್ಷ ಕಿಶೋರ್ ಪಲ್ಲಿಪಾಡಿ, ಶಂಭೂರು ಭಾಗದ ಪ್ರಭಾರಿ ಸೀತಾರಾಮ,ಚುನಾವಣಾ ವಿಸ್ತಾರಕ್ ನವೀನ್ ಅಯೋಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ನಿಂದ ಅಪಪ್ರಚಾರ: ನರಿಕೊಂಬು ಶಕ್ತಿಕೇಂದ್ರದಲ್ಲಿ ಶಾಸಕ ರಾಜೇಶ್ ನಾಯ್ಕ್

ಬಿಜೆಪಿಯ ಅಭಿವೃದ್ದಿ ಕಾರ್ಯಗಳನ್ನು ಸಹಿಸಲಾರದೆ, ಕಾಂಗ್ರೇಸ್ ನಾಯಕರು ಹತಾಶಗೊಂಡು ಸುಳ್ಳು ಅಪಪ್ರಚಾರಗಳ ಕೆಲಸದಲ್ಲಿ ತೊಡಗಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.ಅವರು ನರಿಕೊಂಬು ಶಕ್ತಿ ಕೇಂದ್ರದ ಶೀನ ಪೂಜಾರಿ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಂಟ್ವಾಳ ಪುರಸಭೆಯಲ್ಲಿ ಎಸ್. ಡಿ.ಪಿ.ಐ. ಬಳಿ ಒಪ್ಪಂದದ ಮೂಲಕ ಸಂಬಂಧ ಬೆಳೆಸಿದ್ದು, ಇದೀಗ ಬಂಟ್ವಾಳ ವಿಧಾನ ಸಭಾ ಚುನಾವಣೆಯಲ್ಲಿಯೂ ಮೈತ್ರಿಕೂಟದ ಒಪ್ಪಂದ ಮಾಡಿಕೊಳ್ಳಲಿದೆ, ಹಾಗಾಗಿ ಬಿಜೆಪಿ ಕಾರ್ಯಕರ್ತರು ಒಂದಾಗಿ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ಅವರನ್ನು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ವಿನಂತಿ ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ,ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ, ಶಕ್ತಿ ಕೇಂದ್ರದ ಪ್ರಮುಖ್ ಕಿಶೋರ್, ಚುನಾವಣಾ ಪ್ರಭಾರಿ, ಜನಾರ್ದನ ಬೊಂಡಾಲ, ಬಿಜೆಪಿ ಮಂಡಲದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಗ್ರಾ.ಪಂ.ಅಧ್ಯಕ್ಷೆ ವಿನೀತಾಪುರಷೋತ್ತಮ್,ಉಪಾಧ್ಯಕ್ಷ ಪ್ರಕಾಶ್ ಮಡಿಮೊಗರು, ಸದಸ್ಯರಾದ ರಂಜಿತ್ ಕೆದ್ಯೇಲ್, ರವಿ ಅಂಚನ್, ಉಷಾಲಾಕ್ಷಿ, ಮಮತಾ,ಚೇತನ್ ಏಳಬೆ, ಶುಭ,ರತ್ನಾವತಿ , ಸಂತೋಷ್ ಕುಮಾರ್,ಪುರುಷೋತ್ತಮ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.

ಜನತೆಯ ಪರವಾಗಿ ಅಭಿವೃದ್ಧಿ ಯೋಜನೆ: ಮಣಿನಾಲ್ಕೂರಿನಲ್ಲಿ ಶಾಸಕ ರಾಜೇಶ್ ನಾಯ್ಕ್

ಶಾಸಕತ್ವದ ಕೊನೆಯದಿನದವರೆಗೂ ಕ್ಷೇತ್ರದ ಜನತೆಯ ಪರವಾಗಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನಗಳನ್ನು ತರಿಸುವ ಕೆಲಸಗಳನ್ನು ಮಾಡಿದ್ದೇನೆ ,ಇದರ ಫಲವಾಗಿ ಜನರ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದರು.ಅವರು ಮಣಿನಾಲ್ಕೂರು ಶಕ್ತಿ ಕೇಂದ್ರದ ಆನಂದ ಶೆಟ್ಟಿ  ಬಾಚಕೆರೆ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ರಾಜ್ಯ ಕಿಯೋನಿಕ್ಸ್ ಹರಿಕೃಷ್ಣ ಬಂಟ್ವಾಳ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮನಾಥ ರಾಯಿ,  ಜಿಲ್ಲಾ ಯುವ ಮೋರ್ಚಾದಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಆಶೋಕ್ ಶೆಟ್ಟಿ ಸರಪಾಡಿ, ಮಣಿನಾಲ್ಕೂರು  ಶಕ್ತಿ ಕೇಂದ್ರದ ಪ್ರಭಾರಿ ಪ್ರಕಾಶ್ ಅಂಚನ್, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸದಸ್ಯ ಶಾಂತಪ್ಪ ಪೂಜಾರಿ,  ಶಕ್ತಿ ಕೇಂದ್ರದ ಪ್ರಮುಖ್ ರವೀಂದ್ರ ಶೆಟ್ಟಿ, ಪೂವಪ್ಪ ಪೂಜಾರಿ ಕಡಮಾಜೆ, ಮತ್ತಿತರರು ಉಪಸ್ಥಿತರಿದ್ದರು.

ದೇವಶ್ಯಪಡೂರಿನ್ಲಲಿ ಶಕ್ತಿಕೇಂದ್ರ ಸಭೆ

ದೇವಶ್ಯಪಡೂರು ಶಕ್ತಿ ಕೇಂದ್ರದ ವಿನಯ ಸಪಲ್ಯ ದೋಟ ಅವರ ಮನೆಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕ್ಷೇತ್ರದ ಜನತೆಯ ಪ್ರತಿನಿಧಿಯಾಗಿ ಆಯ್ಕೆಮಾಡಿದ ಫಲವಾಗಿ ಶಾಂತಿಯ ಬಂಟ್ವಾಳವಾಗಿ ಸುಧಾರಣೆ ತರಲು ಸಾಧ್ಯವಾಯಿತು. ಬಂಟ್ವಾಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಎಲ್ಲರೂ ಜೊತೆಯಾಗಿ ಸಹಕಾರ ನೀಡಿದ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಎಸ್.ಡಿ.ಪಿ.ಐ.ಹಾಗೂ ಕಾಂಗ್ರೇಸ್ ಎರಡು ಒಂದೇ ನಾಣ್ಯದ ಎರಡು ಮುಖಗಳು ಎಂದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮನಾಥ ರಾಯಿ,  ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ನಾವೂರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ಪ್ರಭು,ಶಕ್ತಿ ಕೇಂದ್ರದ ಪ್ರಮುಖ್ ಸಂಪತ್ ಸನಿಲ್ ಅಲ್ಲಿಪಾದೆ, ಬೂತ್ ಅಧ್ಯಕ್ಷ ಪ್ರವೀಣ್ ಕುಮಾರ್, ನಾವೂರ ಗ್ರಾಮಪಂಚಾಯತ್ ಸದಸ್ಯೆ ಅಪ್ಪಿ, ಗ್ರಾಮಪಂಚಾಯತ್ ಸದಸ್ಯ ನಾರಾಯಣ ಕಿನ್ನಿಯೂರು,  ಮಾಜಿ ಗ್ರಾ.ಪಂ.ಉಪಾಧ್ಯಕ್ಷೆ ಸಾವಿತ್ರಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಶಾಂತಿ, ನೆಮ್ಮದಿಯ ಬಂಟ್ವಾಳ: ನಾವೂರಿನಲ್ಲಿ ಶಾಸಕ ರಾಜೇಶ್ ನಾಯ್ಕ್

ಶಾಂತಿ,ನೆಮ್ಮದಿಯ ಜೊತೆಗೆ ಬಂಟ್ವಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರಣಕ್ಕಾಗಿ ಬಂಟ್ವಾಳ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಶಾಸಕರ ಆಯ್ಕೆಯಾಗಬೇಕು, ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರು ಸಹಕಾರ ನೀಡಿ ಗೆಲ್ಲಿಸಿಎಂದು ಶಾಸಕ ರಾಜೇಶ್ ನಾಯ್ಕ್ ಮನವಿ ಮಾಡಿದರು.

ಅವರು ನಾವೂರ ಶಕ್ತಿ ಕೇಂದ್ರದ ಗಂಗಾಧರ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕೊರೊನಾ ಅವಧಿಯಲ್ಲಿ ಸಾವನ್ನಪ್ಪಿದ ಬಂಟ್ವಾಳದ ಮಹಿಳೆಯ ಅಂತ್ಯಕ್ರಿಯೆಗೆ ಜಾಗನೀಡದ ಸಮಯದಲ್ಲಿ ಒಡ್ಡೂರಿನ ಮನೆಯ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಿ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ ರಾಜ್ಯದ ಏಕೈಕ ಶಾಸಕ ರಾಜೇಶ್ ನಾಯ್ಕ್ ಎಂದರು, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ನಾವೂರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ಪ್ರಭು, ಶಕ್ತಿ ಕೇಂದ್ರದ ಪ್ರಮುಖ ಶಾಂತಪ್ಪ ಪೂಜಾರಿ, ಶಕ್ತಿ ಕೇಂದ್ರದ ಸದಸ್ಯ ಸದಾನಂದ ನಾವೂರ, ಗ್ರಾ.ಪಂ.ಸದಸ್ಯರಾದ ವಿಜಯ ನಾವೂರ, ಜನಾರ್ದನ, ತ್ರಿವೇಣಿ,ಲೀಲಾ ಮತ್ತಿತರರು ಉಪಸ್ಥಿತರಿದ್ದರು

ಸಜಿಪಮುನ್ನೂರು ಶಕ್ತಿ ಕೇಂದ್ರದಲ್ಲಿ ಪ್ರಮುಖ ಕಾರ್ಯಕರ್ತರ ಸಭೆ

ನೀಡಿದ ಮತಕ್ಕೆ ಕರ್ತವ್ಯ ಎಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು. ಬಂಟ್ವಾಳ ಸಜೀಪ ಮುನ್ನೂರು ಶಕ್ತಿ ಕೇಂದ್ರದ ಎನ್‌ಕೆ.ಶಿವ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾನೂನು ಪ್ರಕೋಷ್ಟದ ಸಂಚಾಲಕ ಶ್ರೀಧರ್ ಶೆಟ್ಟಿ  ಪುಳಿಂಚ ಮಾತನಾಡಿ, ಸಾತ್ವಿಕ ಮನೋಭಾವದ ಓರ್ವ ನಿಷ್ಠಾವಂತ ರಾಜಕಾರಣಿ ರಾಜ್ಯಕ್ಕೆ ಮಾದರಿ ರಾಜೇಶ್ ನಾಯ್ಕ್ ಅವರು ನಿರಂತರವಾಗಿ ಗೆಲುವು ಸಾಧಿಸಬೇಕು ಎಂದು ಅವರು ಹೇಳಿದರು.ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ನಿರಂತರವಾದ ಹೋರಾಟದ ಫಲವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ರಾಜೇಶ್ ನಾಯ್ಕ್ ಅವರ ಕನಸಿನ ಬಂಟ್ವಾಳವಾಗಿ ಶಾಂತಿಯ ಬಂಟ್ವಾಳವಾಗಿ ಬದಲಾವಣೆ ಮಾಡಿದ್ದಾರೆ ಎಂದರು

ನಿಕಟಪೂರ್ವ ಜಿ.ಪ.ಸದಸ್ಯ ರವೀಂದ್ರ ಕಂಬಳಿ ಮಾತನಾಡಿ, ಆದರ್ಶ ವ್ಯಕ್ತಿತ್ವದ ರಾಜಕಾರಣಿ ರಾಜೇಶ್ ನಾಯ್ಕ್ ಅವರನ್ನು ಬಂಟ್ವಾಳದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.

ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ,ಕಾರ್ಯದರ್ಶಿಗಳಾದ ರಮನಾಥ ರಾಯಿ,ಪುರುಷೋತ್ತಮ ಶೆಟ್ಟಿ ವಾಮದಪದವು, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಸಜೀಪ ಮುನ್ನೂರು ಶಕ್ತಿ ಕೇಂದ್ರದ ಪ್ರಭಾರಿ ಸುರೇಶ್ ಕೋಟ್ಯಾನ್, ಗ್ರಾಮಪಂಚಾಯತ್ ಸದಸ್ಯರುಗಳಾದ ಪ್ರವೀಣ್ ಗಟ್ಟಿ, ಸುಮತಿ ಎಸ್, ನವೀನ್ ಆಂಚನ್, ಸುಂದರ ಪೂಜಾರಿ, ದಯಲಕ್ಮೀ, ಅನಿತಾ, ಬೂತ್ ಅಧ್ಯಕ್ಷರುಗಳಾದ ಸೋಮಶೇಖರ್ ಆಲಡಿ, ವಿನೊಧ್ ನಾಯ್ಕ, ರೂಪೇಶ್, ಗೋಪಾಲ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ, ಕುಡಿಯುವ ನೀರಿಗೆ ಕ್ರಮ: ಕರಿಂಗಾಣದಲ್ಲಿ ಶಾಸಕ ರಾಜೇಶ್ ನಾಯ್ಕ್

ಕ್ಷೇತ್ರದ ಜನರಿಗೆ ಕುಡಿಯುವ ನೀರಿಗೆ ಹಾಗೂ ಕೃಷಿಗೆ  ತೊಂದರೆಯಾಗಬಾರದು ಎಂಬ ದೂರದೃಷ್ಟಿಯಿಂದ ನೇತ್ರಾವತಿ ನದಿಗೆ ಚೆಕ್ ಡ್ಯಾಂ ಹಾಗೂ ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಸಣ್ಣ ಸಣ್ಣ ತೋಡುಗಳಿಗೆ ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.

ಅಮ್ಟೂರು ಶಕ್ತಿ ಕೇಂದ್ರದ ಕರಿಂಗಾಣ ರಾಜು ಪೂಜಾರಿ ಅವರ ಮನೆಯಲ್ಲಿ ಪ್ರಮುಖ  ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು,ಕ್ಷೇತ್ರದ ಅಧ್ಯಕ್ಷದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ  ರವೀಶ್ ಶೆಟ್ಟಿ ಕರ್ಕಳ,ಡೊಂಬಯ್ಯ ಅರಳ, ಅಮ್ಟೂರು ಗ್ರಾಮದ ಪ್ರಭಾರಿ ಗಣೇಶ್ ರೈ ಮಾಣಿ, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ,ಉಪಾಧ್ಯಕ್ಷೆ ಲಕ್ಮೀ ಪ್ರಭು, ಕಾನೂನು ಪ್ರಕೋಷ್ಟದ ಸಂಚಾಲಕ ಶ್ರೀಧರ್ ಪುಲಿಂಚ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಗ್ರಾ.ಪಂ.ಸದಸ್ಯರಾದ ಗೋಪಾಲಕೃಷ್ಣ ಪೂವಳ, ಜಯಂತ ಗೌಡ, ಪವಿತ್ರ, ಪ್ರೇಮ, ಸುಷ್ಮಾ, ಎಲಿಯಾಸ್ ಡಿ.ಸೋಜ,ಬೂತ್  ಅಧ್ಯಕ್ಷರುಗಳಾದ ವಿಠಲ ಪ್ರಭು,ಪ್ರಭಾಕರ ಶೆಟ್ಟಿ, ಶ್ರೀಧರ್ ಪೂಜಾರಿ ರಾಯಪ್ಪ ಕೋಡಿ, ಕ್ಷೇತ್ರದ ಕಾರ್ಯದರ್ಶಿ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts