ನಮ್ಮ ನಡೆ, ಪೊಳಲಿ ದೇವಸ್ಥಾನದ ಕಡೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಹಿಂದು ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಬಂಟ್ವಾಳ ಪ್ರಖಂಡ ವತಿಯಿಂದ ಬಿ.ಸಿ.ರೋಡ್, ತುಂಬೆ ಹಾಗೂ ಗುರುಪುರ ಕೈಕಂಬದಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದವರೆಗೆ ಭಾನುವಾರ ಬೆಳಗ್ಗೆ ಪಾದಯಾತ್ರೆ ನಡೆಯಿತು. ಪೊಳಲಿ ಕ್ಷೇತ್ರದಲ್ಲಿ ಯಾತ್ರೆ ಸಂಪನ್ನಗೊಂಡಿತು.
ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿ, ಗೋ ಶಾಲೆ ನಿರ್ಮಾಣ ಹಾಗೂ ಬಡ ಹಿಂದೂ ಹೆಣ್ಣುಮಕ್ಕಳ ಮದುವೆಗೆ ಕ್ಷೇತ್ರದಿಂದ ಉಚಿತ ಸಾಮೂಹಿಕ ಮದುವೆ ಸಹಿತ ಭಕ್ತರ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿಗೆ ಮನವಿ ನೀಡಲಾಯಿತು.
ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು, ಆರೆಸ್ಸೆಸ್ ಪ್ರಮುಖ ಕೊಡ್ಮಣ್ ಕಾಂತಪ್ಪ ಶೆಟ್ಟಿ, ವಿಹಿಂಪ ಬಂಟ್ವಾಳ ಪ್ರಮುಖ್ ಪ್ರಸಾದ್ ಕುಮಾರ್ ರೈ, ಪ್ರಮುಖರಾದ ಗುರುರಾಜ್ ಬಂಟ್ವಾಳ, ದೀಪಕ್ ಆಜೆಕಲ, ಶಿವಪ್ರಸಾದ್ ತುಂಬೆ, ಸುರೇಶ್ ಬೆಂಜನಪದವು, ಸಂತೋಷ್ ಸರಪಾಡಿ, ಕಿರಣ್ ಕುಮ್ದೇಲ್, ಪ್ರಸಾದ್ ಶಿವಾಜಿನಗರ ಬೆಂಜನಪದವು, ಅಭಿನ್ ರೈ, ಪ್ರವೀಣ್ ಕುಂಟಾಲಫಲ್ಕೆ, ಸಂದೇಶ್ ಕಾಡಬೆಟ್ಟು, ಲೋಕೇಶ್ ಲಚ್ಚಿಲ್, ರೋಹಿತ್ ಪೋಡಿಕಲ, ಘಟಕಗಳ ಸದಸ್ಯರು ಕಾರ್ಯಕರ್ತರು ಗುರುಪುರ ಪ್ರಖಂಡದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು