ಬಂಟ್ವಾಳ

ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರ ಆಚರಣೆ

ಜಾಹೀರಾತು

ಬಂಟ್ವಾಳ: ಬಂಟ್ವಾಳ ತಾಲೂಕಿನ ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಇದರೊಂದಿಗೆ ಪವಿತ್ರ ವಾರಕ್ಕೆ ಅತ್ಯಂತ ಭಕ್ತಿ ಪೂರ್ವಕವಾಗಿ ಆರಂಭ ನೀಡಲಾಯಿತು. ಲೊರೆಟ್ಟೊ ಶಾಲಾ ವಠಾರದಲ್ಲಿ ಆರಂಭಗೊಂಡ ಪ್ರಾರ್ಥನಾ ವಿದಿಯ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು, ಮಕ್ಕಳು ಭಕ್ತಿಯಿಂದ  ಪಾಲ್ಗೊಂಡರು. ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ  ಹಾಗೂ ಪ್ರಧಾನ ಧರ್ಮಗುರುಗಳಾಗಿ  ವಂ ಜೇಸನ್ ಮೊನಿಸ್ ಅವರು ಪವಿತ್ರ ಬಲಿ ಪೂಜೆಯನ್ನು ಭಕ್ತಾದಿಗಳೊಂದಿಗೆ ಅರ್ಪಿಸಿದರು. ಚರ್ಚ್ ಪಾಲನಾ ಮಂಡಳಿ  ಮೇಲುಸ್ತುವಾರಿ ವಹಿಸಿತ್ತು.  ತಪಸ್ಸುಕಾಲದಲ್ಲಿ ಸ್ಪಿರಿಚುವಲ್ ರಿನಿವಲ್ ಗೋಸ್ಕರ ಮೂರು ದಿನಗಳ ಧ್ಯಾನಕೂಟವನ್ನು ಸೋಮವಾರದಿಂದ ಬುಧವಾರವರೆಗೆ ಸಂಜೆ 4ರಿಂದ 8ರವರೆಗೆ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನಿಯ ರೋಮನ್ ಪಿಂಟೊ ನಡೆಸಿಕೊಡಲಿದ್ದಾರೆ.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ