ಜಿಲ್ಲಾ ಸುದ್ದಿ

ಆದ್ಯಪಾಡಿ: ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಮಹಾ ಚಂಡಿಕಾಯಾಗ, ಧಾರ್ಮಿಕ ಸಭೆ


ಬಜಪೆ: ದೇವರು ನಮಗೆ ನೀಡಿರುವ ಮನುಷ್ಯ ಜೀವನ ಪಾವನಗೊಳಿಸಲು ದೇವರ ಆರಾಧನೆ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಮತ್ತಿತರ ಉತ್ಸವಗಳಲ್ಲಿ ಕಾಯಾ ವಾಚಾ ಮನಸಾ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಉಳ್ಳಾಲ ಉಳಿಯ ಧರ್ಮರಸು ಉಳ್ಳಾಲ್ತಿ ಕ್ಷೇತ್ರ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದ್ದಾರೆ.

ಇಲ್ಲಿನ ಪ್ರಸಿದ್ದ ಆದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮಂಗಳೂರು ಶ್ರೀ ರಾಮಕೃಷ್ಣ ಮಠದ ಬಾಲಿಕಾಶ್ರಮ ಸ್ವಾಮಿ ರಘುರಮಾನಂದ ಆಶೀರ್ವಚನ ನೀಡಿ, ಅವಿಭಜಿತ ಜಿಲ್ಲೆಯಲ್ಲಿ ಸುಶಿಕ್ಷಿತ ಮತ್ತು ಸುಸಂಸ್ಕೃತ ಭಕ್ತ ಸಮೂಹ ಶಿಸ್ತುಬದ್ಧವಾಗಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಬಂಟ್ವಾಳ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದ್ಯಪಾಡಿ ಚರ್ಚಿನ ಧರ್ಮಗುರು ಫ್ರಾನ್ಸಿಸ್ ರಾಡ್ರಿಗಸ್ ಮಾತನಾಡಿ, ಎಲ್ಲಾ ಧರ್ಮಗಳಿಗಿಂತಲೂ ಮಾನವ ಧರ್ಮವೇ ಶ್ರೇಷ್ಟ ಎಂದರು. ಬಜಗೋಳಿ ಶ್ರೀ ಧರ್ಮದೇವಿ ಕ್ಷೇತ್ರದ ಧರ್ಮದರ್ಶಿ ಸುಧಾಕರ ಸಾಲ್ಯಾನ್, ಉದ್ಯಮಿ ಜಗಧೀಶ್ ಶೆಟ್ಟಿ ಗುರುಪುರ, ಬಿಜೆಪಿ ಮುಖಂಡ ಜನಾರ್ಧನ ಅರ್ಕುಳ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಶುಭ ಹಾರೈಸಿದರು. ಇದೇ ವೇಳೆ ಶಿಬರೂರು ವೇದವ್ಯಾಸ ತಂತ್ರಿ ಮತ್ತು ಲಕ್ಷ್ಮೀನಾರಾಯಣ ಅಸ್ರಣ್ಣ ಕಟೀಲು ಇವರ ಮಾರ್ಗದರ್ಶನದಲ್ಲಿ ಮಹಾ ಚಂಡಿಕಾಯಾಗ ಮತ್ತು ಮಹಾಗಣಪತಿಗೆ ಕಲಶಾಭಿಷೇಕ ನೆರವೇರಿತು. ಕ್ಷೇತ್ರದ ಆಡಳಿತ ಧರ್ಮದರ್ಶಿ ಮೋನಪ್ಪ ಮೇಸ್ತ್ರಿ ಮತ್ತಿತರರು ಇದ್ದರು. ತಿಲಕ್ ಶೆಟ್ಟಿ ಸ್ವಾಗತಿಸಿ, ಅಶೋಕ್ ಜಪ್ಪಿನಮೊಗರು ವಂದಿಸಿದರು. ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts