ಉಜಿರೆ-ಚಾರ್ಮಾಡಿ ರಸ್ತೆಯಲ್ಲಿರುವ ಮೆಡಿಕಲ್ ಶಾಪ್ ಹಾಗೂ ಹಾರ್ಡ್ ವೇರ್ ಅಂಗಡಿಯ ಮೇಲ್ಚಾವಣಿ ಒಡೆದು, ಅಂಗಡಿಗಳನ್ನು ಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಅಂಗಡಿ ಪ್ರವೇಶಿಸಿದ ಕಳ್ಳನ ಕೃತ್ಯಗಳು ಸಿ ಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಮುಖಕ್ಕೆ ಸ್ಕಾರ್ಪ್ ಸುತ್ತಿಕೊಂಡು ಅಂಗಡಿಗಳನ್ನು ಜಾಲಾಡಿ ಹೆಚ್ಚಿನ ನಗದು ಸಿಗದೆ ಇದ್ದಾಗ ದಿನಬಳಕೆಯ ಕೆಲವು ವಸ್ತುಗಳನ್ನು ಕಳ್ಳತನ ಮಾಡಿದ್ದಾಗಿ ದೂರಲಾಗಿದೆ.
ಇವಿಷ್ಟೇ ಅಲ್ಲದೆ, ಕಳ್ಳ ತನಗೆ ಬೇಕಾದ ದುಡ್ಡು ಸಿಗದೇ ಇದ್ದಾಗ ಕೆಲ ದುಷ್ಕೃತ್ಯಗಳನ್ನ ಮಾಡಿದ್ದಾನೆ. ಮೆಡಿಕಲ್ ಅಂಗಡಿಯ ಲ್ಯಾಪ್ ಟಾಪನ್ನು ಕಟ್ಟಡದ ಮೇಲ್ಭಾಗಕ್ಕೆ ಕೊಂಡೊಯ್ದು ಪುಡಿಗಯ್ಯಲಾಗಿದೆ. ಸ್ವಯ್ಪ್ ಮೆಷೀನ್ ಅನ್ನು ನೀರು ತುಂಬಿದ್ದ ಬಕೆಟ್ ಗೆ ಹಾಕಲಾಗಿದೆ. ಹಾರ್ಡ್ ವೇರ್ ಅಂಗಡಿಯ ಕೇಬಲ್ ಗಳಿಗೆ ಹಾನಿ ಮಾಡಲಾಗಿದೆ.
IFTAAR ORGANISED BY FORMER MINISTER RAMANATHA RAI AT PANEMANGALORE (more…)