ಬಂಟ್ವಾಳ: ಮಾರ್ನಬೈಲ್ ನಾಗನವಳಚ್ಚಿಲುವಿನಲ್ಲಿ ಫೆಬ್ರವರಿ 17 ಮತ್ತು 18ರಂದು ಡಾ. ಎಚ್.ಪಿ.ಸಪಲಿಗ ವೇದಿಕೆಯಲ್ಲಿ ಎರಡೂ ದಿನಗಳ ಕಾಲ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಯಕ್ಷಗಾನ ಬಯಲಾಟ ಸಂಭ್ರಮದ ಸುವರ್ಣ ಮಹೋತ್ಸವ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಮಹಾಚಂಡಿಕಾಯಾಗ, ಶ್ರೀ ದುರ್ಗಾಹೋಮ ಹಾಗೂ ಯಕ್ಷಗಾನೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಸಂಜೆ ಶ್ರೀ ಕ್ಷೇತ್ರ ನಂದಾವರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ ಬಿಡುಗಡೆ ಮಾಡಿದರು.,
ಫೆ.17ರಂದು ಮಹಾಚಂಡಿಕಾಯಾಗ, ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮಗಳು ಇರಲಿದ್ದು, ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರಿಂದ ನೃತ್ಯವೈಭವ ಇರಲಿದೆ.
ಫೆ.18ರಂದು ಶ್ರೀದೇವಿಗೆ ಚಿನ್ನದ ಸರ ಸಮರ್ಪಣೆ, ಶ್ರೀ ದುರ್ಗಾಹೋಮ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ 5.45ಕ್ಕೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ಇರಲಿದೆ ಎಂದು ಸಮಿತಿ ಅಧ್ಯಕ್ಷ ಸಂದೀಪ್ ಕುಮಾರ್ ನಾಗನವಳಚ್ಚಿಲ್ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಬಯಲಾಟ ಸಂಭ್ರಮ ಸುವರ್ಣ ಮಹೋತ್ಸವ ಸಮಿತಿ ಸಂಯೋಜಕ ದಾಮೋದರ ಬಿ.ಎಂ ಮಾರ್ನಬೈಲ್, ಪುರೋಹಿತ ಪ್ರಕಾಶ್ ಮರಾಠೆ, ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿಗಳಾದ ಎನ್.ಶಿವಶಂಕರ ನಂದಾವರ, ಎನ್.ಕೆ.ಶಿವ ಖಂಡಿಗ, ಬ್ರಹ್ಮಕಲಶೋತ್ಸವ ಕಾರ್ಯಾಲಯ ಸಮಿತಿ ಸಹಸಂಚಾಲಕ ರಾಮಕೃಷ್ಣ ಭಂಡಾರಿ,ಪ್ರಮುಖರಾದ ಶಶಿಧರ ಆಳ್ವ, ಯಕ್ಷಗಾನ ಮಹೋತ್ಸವ ಸಮಿತಿಯ ಪ್ರಮುಖರಾದ ರೂಪೇಶ್ ಆಚಾರ್ಯ, ರಾಮಪ್ಪ ಮಾಸ್ತರ್ ಮಾರ್ನಬೈಲು, ಗೋಪಾಲಕೃಷ್ಣ ಸುಂದರ್, ದೇವದಾಸ ಮಾಸ್ತರ್, ಸೋಮನಾಥ ಬಿ.ಎಂ, ಸಂಜಯ್ ನಾಯ್ಕ್, ವಿಶ್ವರಾಜ್, ಮಹಿಳಾ ಸಮಿತಿಯ ಸಂಚಾಲಕಿ ಶಕುಂತಳಾ ಅಶೋಕ್ ಗಟ್ಟಿ, ಬಬಿತಾ ಸಂದೀಪ್, ದೇವಿಕಾ ದಾಮೋದರ್ ಉಪಸ್ಥಿತರಿದ್ದರು.