ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಾಲಯದ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ನೆರವೇರಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ ಸಮಿತಿಗಳಲ್ಲಿ ತೊಡಗಿಸಿಕೊಂಡು ಮಾಡುವಂತಹ ಕಾರ್ಯಗಳಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಬಿ.ಸಿ.ರೋಡು ಚಂಡಿಕಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ರಾಕೇಶ್ ಮಲ್ಲಿ, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಸಂಚಾಲಕ ಡಾ. ವಿಶ್ವನಾಥ ನಾಯಕ್ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಿ. ಶೆಟ್ಟಿ ದಲಂದಿಲ ಮಾತನಾಡಿ, ಎಲ್ಲರ ಭಕ್ತಿಯ ತೊಡಗಿಸುವಿಕೆಯಿಂದ ನಮ್ಮ ಪುಣ್ಯದ ಫಲಗಳು ವೃದ್ಧಿಯಾಗುವುದೆಂದು ತಿಳಿಸಿದರು.
ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಯಶವಂತ ದೇರಾಜೆಗುತ್ತು ಹಸಿರುವಾಣಿ ಹೊರೆಕಾಣಿಕೆಯ ವಿವರ ತಿಳಿಸಿದರು. ಅಭಿವೃದ್ಧಿ ಸಮಿತಿ ಸದಸ್ಯರೂ, ಕಾರ್ಯಾಲಯ ಸಮಿತಿ ಪ್ರಧಾನ ಸಂಚಾಲಕ ದಾಮೋದರ ಬಿ.ಎಂ. ಮಾರ್ನಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ವಾಳ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಉಪಾಧ್ಯಕ್ಷ ರಾಮಪ್ರಸಾದ್ ಪೂಂಜ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಉಪಾಧ್ಯಕ್ಷ ಎಂ. ಮಹಾಬಲ ಕೊಟ್ಟಾರಿ ಪ್ರಧಾನ ಅರ್ಚಕರಾದ ಮಹೇಶ್ ಭಟ್ ಉಪಸ್ಥಿತರಿದ್ದರು.
ವಿವಿಧ ಸಮಿತಿಗಳ ಪ್ರಮುಖರಾದ ಜಯಶಂಕರ ಬಾಸ್ರಿತ್ತಾಯ, ರತ್ನಾಕರ ಪೂಜಾರಿ ನಾಡಾರ್, ಅರುಣ್ ಕುಮಾರ್ ಕುಕ್ಕುದಕಟ್ಟೆ, ಅಶೋಕ್ ಗಟ್ಟಿ ಕಟ್ಲೆಮಾರ್, ಸುರೇಶ್ ಬಂಗೇರ ಆರ್ಯಾಪು, ಶಿವಶಂಕರ್ ನಂದಾವರ, ಎನ್. ಕೆ. ಶಿವ, ಮೋಹನದಾಸ ಹೆಗ್ಡೆ, ಜಯಶ್ರೀ ಅಶೋಕ್, ಕವಿತಾ ವಸಂತ್, ದೇವಪ್ಪ ನಾಯ್ಕ, ಸಂದೀಪ್ ಕುಮಾರ್, ಸತೀಶ್ ಗೌಡ, ಜಗದೀಶ್ ಐತಾಳ್, ಶ್ರವಣ್ ಮರ್ತಾಜೆ ಹಾಗೂ ಕಾರ್ಯಾಲಯ ಸಮಿತಿಯ ಚಂದು ನಾಯ್ಕ ನಗ್ರಿ, ಲಿಂಗಪ್ಪ ಎಸ್. ದೋಟ, ಶ್ರೀನಿವಾಸ ಖಂಡಿಗ, ಜಯಂತ ಶೆಟ್ಟಿ, ದೇವದಾಸ್ ಮಾಸ್ತರ್, ಮನೋಜ್ ಆಳ್ವ, ಪ್ರವೀಣ್ ಬೀಡಿನಪಾಲು, ಧನಂಜಯ, ಚೇತನ್ ಎನ್., ರೂಪಾ ಚೇತನ್, ಭವಾನಿ ನಾರಾಯಣ ಅಮೀನ್, ನಳಿನಿ ರೈ, ಶೈಲಜಾ ಹರೀಶ್ ನಾಯಕ್, ವನಿತಾ ದೇವಾಡಿಗ, ಅರ್ಪಿತಾ ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕಾರಾಜೆ ನಿರೂಪಿಸಿದರು. ಕಾರ್ಯಾಲಯ ಸಂಚಾಲಕರಾದ ರಾಮಕೃಷ್ಣ ಭಂಡಾರಿ ಧನ್ಯವಾದ ಸಮರ್ಪಿಸಿದರು.