ಜಿಲ್ಲಾ ಸುದ್ದಿ

ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಗ್ರಾಮವಿಕಾಸ ಯಾತ್ರೆ ಆರಂಭ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ಜನವರಿ 14ರಿಂದ 26ರವರೆಗೆ 13 ದಿನಗಳ ಗ್ರಾಮ ವಿಕಾಸ ಯಾತ್ರೆ – ಗ್ರಾಮದೆಡೆಗೆ ಶಾಸಕರ ನಡಿಗೆ ಪರಿಕಲ್ಪನೆಯಡಿ ಪಾದಯಾತ್ರೆಯನ್ನು ಶನಿವಾರ ಮಧ್ಯಾಹ್ನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸನ್ನಿಧಿಯಿಂದ ಆರಂಭಿಸಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ಜಾಹೀರಾತು

ಆತಂಕವಾದ , ಭ್ರಷ್ಟಾಚಾರ ವಾದ, ಪರಿವಾರವಾದ ಈ ದೇಶಕ್ಕೆ ಕಾಂಗ್ರೆಸ್ ನೀಡಿರುವ ದೊಡ್ಡ ಕೊಡುಗೆ ಎಂದು ವಾಗ್ದಾಳಿ ನಡೆಸಿದ ನಳಿನ್, ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗಳನ್ನು ಟೀಕಿಸಿದರು.

ಇಂದು ಕಾಂಗ್ರೆಸ್ 200 ಯೂನಿಟ್ ವಿದ್ಯುತ್ ಫ್ರೀ ನೀಡುವುದಾಗಿ ಹೇಳುತ್ತಿದೆ. ಇಷ್ಟು ವರ್ಷ ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ನಳಿನ್, ಕರೆಂಟ್ ನಿರಂತರ ಕಡಿತವಾಗಿದ್ದ ಸಂದರ್ಭ ಸುಳ್ಯದ ವ್ಯಕ್ತಿಯೋರ್ವ ಸಚಿವರಿಗೆ ದೂರವಾಣಿ ಕರೆ ಮಾಡಿದ್ದಕ್ಕೆ ಜೈಲಿಗೆ ಹಾಕಿಸಿದ ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ಮಾತನಾಡುತ್ತದೆ ಎಂದು ಲೇವಡಿ ಮಾಡಿದರು.

ಶಾಸಕ ರಾಜೇಶ್ ನಾಯ್ಕ್ ಅವರು ಸಜ್ಜನಿಕೆಯ ರಾಜಕಾರಣ ಮಾಡುವುದರ ಮೂಲಕ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯನ್ನು ಏಕಕಾಲದಲ್ಲಿ ನಿರ್ವಹಿಸಿದ್ದಾಗಿ ಶ್ಲಾಘಿಸಿದರು. ಸ್ಯಾಂಡ್ ಮಾಫಿಯಾ, ಲ್ಯಾಂಡ್ ಮಾಫಿಯಾ, ಗೂಂಡಾಗಿರಿಯ ರಾಜಕಾರಣ ನಿಂತುಹೋಗಿದೆ.  ಅಭಿವೃದ್ಧಿಯ ಪರ್ವ ನಡೆಯುತ್ತಿದೆ ಎಂದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಗೆ ಪಕ್ಷದ ಧ್ವಜವನ್ನು ನೀಡಿ ದ‌ಕ.ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ, ಮುಂದೆಯೂ ನಿಮ್ಮ ಸಹಕಾರ ಆಶ್ರೀರ್ವಾದ ಇರಲಿ ಎಂದು ಅವರು ಮನವಿ ಮಾಡಿದರು.

ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತ್ಯಾನಂದ ಸ್ವಾಮೀಜಿ ಅವರನ್ನು ಬೇಟಿ ಮಾಡಿ ಅಶ್ರೀರ್ವಾದ ಪಡೆದು ಬಳಿಕ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಅಧ್ಯಕ್ಷತೆಯನ್ನು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಯಾತ್ರೆ ಸಂಚಾಲಕ ದೇವದಾಸ ಶೆಟ್ಟಿ, ಸಹಸಂಚಾಲಕರಾದ ಮಾಧವ ಮಾವೆ, ಸುದರ್ಶನ ಬಜ, ಪೊಳಲಿ ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್, ರಾಮ ಭಟ್, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಜಿಪಂ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು ಪಾಲ್ಗೊಂಡರು. ತೆಂಕಬೆಳ್ಳೂರು ಕಾವೇಶ್ವರ ದೇವಸ್ಥಾನದವರೆಗೆ ಯಾತ್ರೆ ಸಾಗಿತು.

ಜಗದೀಶ್ ಅಧಿಕಾರಿ,ವೆಂಕಟೇಶ ನಾವಡ, ಯಶವಂತ ಪೊಳಲಿ, ಚಂದ್ರಾವತಿ ಕರಿಯಂಗಳ, ಕಿಶೋರ್ ಪಲ್ಲಿಪಾಡಿ, ಲೋಕೇಶ್ ಭರಣಿ, ಸುಕೇಶ್ ಚೌಟ, ಅರುಣ್ ರೋಶನ್ ಡಿ.ಸೋಜ, ದಿನೇಶ್ ಅಮ್ಟೂರು, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಚರಣ್ ಜುಮಾದಿಗುಡ್ಡೆ, ಯಶೋಧರ ಕರ್ಬೆಟ್ಟು, ಹರ್ಷಿಣಿ ಪುಷ್ಪಾನಂದ, ವಿದ್ಯಾವತಿ ಪ್ರಮೋದ್ ಕುಮಾರ್, ಸವಿತಾ ಶೆಟ್ಟಿ, ಲಖಿತ್ ಆರ್ ಶೆಟ್ಟಿ, ರೇಖಾ ಪೈ, ರೊನಾಲ್ಡ್ ಡಿ.ಸೋಜ, ಪ್ರಕಾಶ್ ಅಂಚನ್, ಚಿದಾನಂದ ರೈ, ಮೋಹನ್ ಪಿ.ಎಸ್, ಪುರುಷೋತ್ತಮ ಸಾಲಿಯಾನ ನರಿಕೊಂಬು, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಸುರೇಶ್ ಕೋಟ್ಯಾನ್, ಪ್ರಭಾಕರ ಪ್ರಭು, ದೇವಿಪ್ರಸಾದ್ ಕೆಲಿಂಜ, ಗೋಪಾಲ ಸುವರ್ಣ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಉದಯ ಕುಮಾರ್ ರಾವ್ ಬಂಟ್ವಾಳ,  ಸೀಮಾ ಮಾಧವ, ಸುಷ್ಮಾ ಚರಣ್, ಆಶಾ ಪಿ.ಶೆಟ್ಟಿ, ಮೊನಪ್ಪ ದೇವಶ್ಯ, ನಳಿನ್ ಬಿ‌‌.ಶೆಟ್ಟಿ, ವಿದ್ಯಾದರ ರೈ, ನಂದರಾಮ ರೈ, ರತ್ನಕುಮಾರ್ ಚೌಟ,  ಡಾ. ಪ್ರಶಾಂತ್ ಮಾರ್ಲ, ಸದಾನಂದ ಶೆಟ್ಟಿ ರಂಗೋಲಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ವಜ್ರನಾಥ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.