ಬಂಟ್ವಾಳ: ಸುರತ್ಕಲ್ ನ ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಮಂಚಿ ಕುಕ್ಕಾಜೆಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಗೋಷ್ಠಿಯನ್ನು ಡಿ.25ರ ಭಾನುವಾರ ಆಯೋಜಿಸಲಾಗಿದೆ. ಇಲ್ಲಿನ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಸಂಜೆ 5.30ರಿಂದ 6.30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಎಂ.ಆರ್.ಪಿ.ಎಲ್. ಮಂಗಳೂರು ಸಹಕಾರ ನೀಡಲಿದೆ.
ವಿದುಷಿ ಶಾರದಾ ಭಟ್ ಕಟ್ಟಿಗೆ, ಮೈಸೂರು ಇವರಿಂದ ಗಾಯನ ಇರಲಿದ್ದು, ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್, ಸಂವಾದಿನಿಯಾಗಿ ಶಶಿಕಿರಣ್ ಮಣಿಪಾಲ ಸಹಕರಿಸಲಿದ್ದಾರೆ.
ಮೈಸೂರಿನಲ್ಲಿ ನೆಲೆಸಿರುವ ಶಾರದಾ ಭಟ್, ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿದ್ದು, ಹಿಂದುಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರರು ಹಾಗೂ ವಿದ್ವತ್ ಪದವಿ ಪಡೆದಿದ್ದಾರೆ. ಅವರು ತನ್ನ ತಂದೆ ಕಟ್ಟಿಗೆ ಸುಬ್ರಹ್ಮಣ್ಯ ಭಟ್ ಅವರಿಂದ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದು, ಧಾರವಾಡದ ಪಂಡಿತ್ ಚಂದ್ರಶೇಖರ ಪುರಾಣಿಕ್ ಮಠ್, ಪಂಡಿತ್ ಷಡಕ್ಷರಿ ಗವಾಯಿ, ಪಂಡಿತ್ ಪರಮೇಶ್ವರ ಹೆಗಡೆ, ಪಂಡಿತ್ ಇಂಧೂದರ ನಿರೋಡಿ, ಪಂಡಿತ್ ಎಸ್.ಸಿ.ಆರ್. ಭಟ್ ಮತ್ತು ಲಘು ಶಾಸ್ತ್ರೀಯ ಸಂಗೀತವನ್ನು ಪಂಡಿತ್ ವಸಂತ್ ಕನಕಾಪುರ್ ಅವರಿಂದ ಅಭ್ಯಸಿಸಿದ್ದಾರೆ.