ಬಂಟ್ವಾಳ: ಬಂಟ್ವಾಳ ಆಡಳಿತ ಸೌಧದಲ್ಲಿ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆಯನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಜಗತ್ತನ್ನು ವಿನ್ಯಾಸಗೊಳಿಸಿದ ವಿಶ್ವಕರ್ಮ ಜಯಂತಿ ಆಚರಣೆಯನ್ನು ಎಲ್ಲರೂ ಒಟ್ಟಾಗಿ ನಡೆಸಬೇಕು ಎಂಬ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮಗಳನ್ನೂ ಮಾಡಲಾಗುತ್ತಿದೆ. ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆಯೂ ನಡೆದಿದ್ದು, ನವಭಾರತದ ನಿರ್ಮಾಣದಲ್ಲಿ ಅವರು ತೊಡಗಿಸಿಕೊಂಡಿರುವುದು ಸಂತಸ ತಂದಿದೆ ಎಂದರು.
ಬಂಟ್ವಾಳ ಕಾಲೇಜಿನ ಪ್ರಾಧ್ಯಾಪಕ ಮುರಳೀಧರ ಅವರು ವಿಶ್ವಕರ್ಮ ಪೂಜೆಯ ಕುರಿತು ಉಪನ್ಯಾಸ ನೀಡಿದರು. ಬಂಟ್ವಾಳ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಸುಧಾಕರ ಆಚಾರ್ಯ, ಕಾರ್ಯದರ್ಶಿ ಸಂದೀಪ್ ಬಿ., ಮಹಿಳಾ ಘಟಕಾಧ್ಯಕ್ಷೆ ಪ್ರತಿಮಾ ಆಚಾರ್ಯ, ಪ್ರಮುಖರಾದ ಸುನಿಲ್, ಉಮೇಶ್ ಆಚಾರ್ಯ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಉಪತಹಸೀಲ್ದಾರ್ ವಿಜಯ ವಿಕ್ರಮ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ವಿಷಯ ನಿರ್ವಾಹಕ ವಿಷುಕುಮಾರ್ ವಂದಿಸಿದರು.