ಪಾಣೆಮಂಗಳೂರು ಮತ್ತು ಬಂಟ್ವಾಳ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಕ್ಷೇತ್ರದಲ್ಲಿ ಸ್ವಾತಂತ್ತ್ತೋತ್ಸವದ ಕಾಲ್ನಡಿಗೆ ಜಾಥಾ ಸಂದರ್ಭ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ತೆರಳಿ ಭೇಟಿಯಾದರು. ಈ ಸಂದರ್ಭ ಪೂಜಾರಿಯವರು ಧ್ವಜವನ್ನು ಸ್ವೀಕಾರ ಮಾಡಿ ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮುಖಂಡರಾದ ರಕ್ಷಿತ್ ಶಿವರಾಮ್, ವಾಸು ಪೂಜಾರಿ ಲೋರಟ್ಟೋ, ಶಬ್ಬೀರ್ ಸಿದ್ದಕಟ್ಟೆ, ಅಪ್ಪಿ ಉಪಸ್ಥಿತರಿದ್ದರು.