ಬಂಟ್ವಾಳ

ಅಭಿವೃದ್ಧಿ ಪಥದತ್ತ ಬಂಟ್ವಾಳ – ಪೊಳಲಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ರಸ್ತೆ ಕಾಮಗಾರಿ ಉದ್ಘಾಟಿಸಿ ಸಂಸದ ನಳಿನ್ ಕುಮಾರ್

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಪ್ರಯತ್ನದ ಅನುದಾನದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 28.5 ಕೋಟಿ ರೂ ಮೊತ್ತದ 56 ಗ್ರಾಮಗಳ 231 ಕಾಮಗಾರಿ ಮತ್ತು ಲೋಕೋಪಯೋಗಿ ಇಲಾಖೆಯ 73.75 ಕೋಟಿ ರೂ ಮೊತ್ತದ 22 ಕಾಮಗಾರಿಗಳು ಸೇರಿ ಒಟ್ಟು 102.5 ಕೋಟಿ ರೂ ಮೊತ್ತದ 253 ಕಾಮಗಾರಿಗಳ ಶಿಲಾನ್ಯಾಸ ಮತ್ತು ಕಾರ್ಯಾರಂಭ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಪೂಜೆ ಬಳಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಪೊಳಲಿಯಲ್ಲಿ ಉದ್ಘಾಟನೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ರಾಜೇಶ್ ನಾಯ್ಕ್ ಅವರು ಸದ್ದಿಲ್ಲದೆ ಕ್ಷೇತ್ರದ ಅಭಿವೃದ್ಧಿ ನಡೆಸುತ್ತಿದ್ದು, ನಾಲ್ಕೂವರೆ ವರ್ಷಗಳಲ್ಲಿ ಬಂಟ್ವಾಳ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ನೆಮ್ಮದಿಯೊಂದಿಗೆ ಕ್ಷೇತ್ರ ಬೆಳವಣಿಗೆ ಕಾಣುತ್ತಿದೆ ಎಂದರು.

40 ಲಕ್ಷ ರೂ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿ ಚರಂಡಿ ನಿರ್ಮಾಣ, 10 ಲಕ್ಷ ರೂ ವೆಚ್ಚದಲ್ಲಿ ಶ್ರೀ ಪೊಳಲಿ ರಾಮಕೃಷ್ಣ ತಪೋವನ ರಸ್ತೆ , 28 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಬಂಟ್ವಾಳ ಕ್ಷೇತ್ರದ 56 ಗ್ರಾಮಗಳ 231 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೊಳಲಿಯಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, , ಸಾರ್ವಜನಿಕರು ಕಾಮಗಾರಿ ಗುಣಮಟ್ಟವನ್ನು ಪರಿಶೀಲನೆ ಮಾಡುವುದರ ಮೂಲಕ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದರು.

ಜಾಹೀರಾತು

ಮಾಜಿ ಶಾಸಕ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿಕೆ.ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ತುಂಗಪ್ಪ ಬಂಗೇರ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಗಣೇಶ್ ಸುವರ್ಣ, ಚಂದ್ರಾವತಿ, ಪೊಳಲಿ ವೆಂಕಟೇಶ್ ನಾವುಡ, ಯಶವಂತ ಪೂಜಾರಿ, ರಾಮದಾಸ ಬಂಟ್ವಾಳ, ಸುದರ್ಶನ ಬಜ, ಸೋಮಪ್ಪ ಕೋಟ್ಯಾನ್, ಪ್ರಭಾಕರ ಪ್ರಭು, ರತ್ನ ಕುಮಾರ್ ಚೌಟ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಪ್ರಕಾಶ್ ಅಂಚನ್, ರಮನಾಥ ರಾಯಿ, ಅಭಿಷೇಕ್ ರೈ, ಯಶವಂತ ನಗ್ರಿ, ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಯಶೋಧರ ಕರ್ಬೆಟ್ಟು, ವಜ್ರನಾಥ ಕಲ್ಲಡ್ಕ ಸುರೇಶ್ ಕೋಟ್ಯಾನ್, ಮಾಧವ ಮಾವೆ, ನಂದರಾಮ ರೈ, ಪುಷ್ಪರಾಜ್ ಚೌಟ, ಉದಯಕುಮಾರ್ ರಾವ್, ಚರಣ್ ಜುಮಾದಿಗುಡ್ಡೆ, ಅಭಿಷೇಕ್ ಶೆಟ್ಟಿ, ಸಚಿನ್ ಅಡಪ, ದಿನೇಶ್ ಅಮ್ಟೂರು, ಯಶೋಧರ ಚೌಟ, ಸುಕೇಶ್ ಚೌಟ, ಕಿಶೋರ್ ಪಲ್ಲಿಪಾಡಿ, ಬಾಲಕೃಷ್ಣ ಸೆರ್ಕಳ, ಸಾಂತಪ್ಪ ಪೂಜಾರಿ, ಶರ್ಮಿತ್ ಜೈನ್, ಕಾರ್ತಿಕ್ ಬಳ್ಳಾಲ್, ಪ್ರೇಮನಾಥ ಶೆಟ್ಟಿ, ಕಿಶೋರ್ ಶೆಟ್ಟಿ, ಮಾಧವ ಕರ್ಬೆಟ್ಟು, ಧನಂಜಯ ಶೆಟ್ಟಿ, ಯಶವಂತ ನಾಯ್ಕ್, ಸುಪ್ರೀತ್ ಆಳ್ವ, ಗಿರಿಪ್ರಕಾಶ್ ತಂತ್ರಿ, ಲೋಕೇಶ್ ಭರಣೆ, ಚಂದ್ರಾವತಿ ದೇವಾಡಿಗ, ದೇವಳದ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಪರಮೇಶ್ವರ ಭಟ್, ಕೆ. ರಾಮ್ ಭಟ್, ರಾಧಕೃಷ್ಣ ತಂತ್ರಿ ಪೊಳಲಿ, ಕಾರ್ತಿಕ್ ಬಳ್ಳಾಲ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಲೋಕೋಪಯೋಗಿ ಎಇಇ ಜಯಪ್ರಕಾಶ್, ಗುತ್ತಿಗೆದಾರರಾದ ಎ.ಎಚ್.ಖಾದರ್, ಧೀರಜ್ ನಾಯ್ಕ್ ಮತ್ತಿತರರು ಇದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ