ಬಂಟ್ವಾಳ: ಬಂಟ್ವಾಳದಿಂದ ಹಾದುಹೋಗುವ ನೇತ್ರಾವತಿ ನದಿ ಮಂಗಳವಾರ ಬೆಳಗಿನ ಜಾವ 6.6 ಮೀಟರ್ ಎತ್ತದರಲ್ಲಿ ಹರಿಯುತ್ತಿದೆ. ಬಂಟ್ವಾಳದಾದ್ಯಂತ ನಿರಂತರ ಮಳೆಯಾಗುತ್ತಿದೆ,
ಸೋಮವಾರ ಸಂಜೆ ವೇಳೇ 6.5 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇದು ಈ ವರ್ಷದ ಗರಿಷ್ಠ ಪ್ರಮಾಣದ ಮಾಪನವಾಗಿದೆ. ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹರಿವು ಹೆಚ್ಚಳವಾಗಿದೆ.