ಬಂಟ್ವಾಳ: ಮಣಿನಾಲ್ಕೂರು ಗ್ರಾಮದಲ್ಲಿ 2.82 ಕೋಟಿ ರೂ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಪೂರ್ಣವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಅನುದಾನ ಬಳಕೆ ಮಾಡಿಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಡುವ ಕೆಲಸ ನಡೆದಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ಕೋಟಿ 82 ಲಕ್ಷ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟಿಸಿದ ಬಳಿಕ ಮಾತನಾಡಿದರು.
42 ,ಲಕ್ಷ ಅನುದಾನದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನಡುಮೊಗರು ನೂತನ ಶಾಲಾ ಕಟ್ಟಡ ನಿರ್ಮಾಣ. 50 ಲಕ್ಷ ರೂ. ಅನುದಾನದ ಲ್ಲಿ ಮಣಿನಾಲ್ಕೂರು ಇಳಿಯೂರು ರಸ್ತೆ ಕಾಮಗಾರಿ. 15 ಲಕ್ಷ ರೂ. ಅನುದಾನದ ಲ್ಲಿ ಮಣಿನಾಲ್ಕೂರು ಕೊಲ್ಯ ರಸ್ತೆ ಕಾಮಗಾರಿ. 10 ಲಕ್ಷ ರೂ ಅನುದಾನದ ಲ್ಲಿ ಮಣಿನಾಲ್ಕೂರು ಕೇಸರಿ ಯುವಕ ಮಂಡಲದ ರಸ್ತೆ ಕಾಮಗಾರಿ. 10 ಲಕ್ಷ ಅನುದಾನದಲ್ಲಿ ಮಣಿನಾಲ್ಕೂರು ಬಾರೆತ್ಯಾ ರಸ್ತೆ ಕಾಮಗಾರಿ. 06 ಲಕ್ಷ ರೂ ಅನುದಾನದಲ್ಲಿ ಮಣಿನಾಲ್ಕೂರು ಅಂಬೆಡ್ಕರ್ ನಗರ ರಸ್ತೆ ಕಾಮಗಾರಿ. 26 ಲಕ್ಷ ಅನುದಾನದ ಲ್ಲಿ ಮಣಿನಾಲ್ಕೂರು ನೈಬಿಲು ರಸ್ತೆ ಕಾಮಗಾರಿ. 37 ಲಕ್ಷ ರೂ ಅನುದಾನದ ಲ್ಲಿ ಮಣಿನಾಲ್ಕೂರು ಕೈಯಾಲ ರಸ್ತೆ ಕಾಮಗಾರಿ. 46 ರೂ ಅನುದಾನದ ಲ್ಲಿ ಮಣಿನಾಲ್ಕೂರು ಕಡಮಾಜೆ ರಸ್ತೆ ಕಾಮಗಾರಿ. 10 ಲಕ್ಷ ಅನುದಾನದ ಲ್ಲಿ ಮಣಿನಾಲ್ಕೂರು ಕೋಡಿ ರಸ್ತೆ ಕಾಮಗಾರಿ. 20 ಲಕ್ಷ ರೂ.ಅನುದಾನದ ಲ್ಲಿ ಮಣಿನಾಲ್ಕೂರು ಡೆಚ್ಚಾರು ರಸ್ತೆ ನಿರ್ಮಾಣ. 10 ಲಕ್ಷ ರೂ. ಅನುದಾನದಲ್ಲಿ ಮಣಿನಾಲ್ಕೂರು ಕಾಣೆಕೋಡಿ ರಸ್ತೆ ನಿರ್ಮಾಣ ಕಾಮಗಾರಿ ಇದರಲ್ಲಿ ಸೇರಿವೆ.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಣಿನಾಲ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ, ಸದಸ್ಯರಾದ ಶಾಂತಪ್ಪ ಪೂಜಾರಿ ಹಟ್ಟದಡ್ಕ, ದಯಾನಂದ ಸುಳ್ಯ,ಸರೋಜಿನಿ, ಸರಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಮಕೃಷ್ಣ ಮಯ್ಯ, ದಿನೇಶ್ ಗೌಡ ನೀರೊಲ್ಬೆ, ಧನಂಜಯ ಶೆಟ್ಟಿ ಸರಪಾಡಿ, ಕಾವಳಪಡೂರು ಗ್ರಾಪಂ ಉಪಾಧ್ಯಕ್ಷ ಅಜಿತ್ ಶೆಟ್ಟಿ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ಸುದರ್ಶನ ಬಜ, ಪ್ರಕಾಶ್ ಕರ್ಲ, ಕಾರ್ತಿಕ್ ಬಲ್ಲಾಳ್, ಗಣೇಶ್ ರೈ ಮಾಣಿ, ಮೋಹನ್ ಆಚಾರ್, ಧರಣೇಂದ್ರ ಜೈನ್ ಕೊಲ್ಯ, ಅಭಿಷೇಕ್ ಸುವರ್ಣ, ಸಂತೋಷ್ ನೇಲ್ಯಪಲ್ಕೆ, ಶರ್ಮಿತ್ ಜೈನ್ , ಮೋನಪ್ಪ ಪೂಜಾರಿ ಬೈಸೊಂಬು, ರಾಜೇಂದ್ರ ಕಡಮಾಜೆ, ಪ್ರಕಾರದ ಅಂಚನ್ ನೇಲ್ಯಪಲ್ಕೆ, ಸಾಯಿಶಾಂತಿ ಕೋಕಲ, ರವೀಂದ್ರ ಕೈಯಾಳ, ಅಭಿಷೇಕ್ ಶೆಟ್ಟಿ, ಪ್ರಕಾಶ್ ಅಂಚನ್,ನಾಗೇಶ್ ನೈಬೇಲು, ಆನಂದ ಶೆಟ್ಟಿ ಬಾಚಕೆರೆ, ಶಿವಪ್ಪ ಪೂಜಾರಿ ಹಟ್ಟದಡ್ಕ ,ತಿಲಕ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.