ಬಂಟ್ವಾಳ

ಬಂಟ್ವಾಳದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಒಟ್ಟು ನೂರು ಕೊಠಡಿ ನಿರ್ಮಾಣದ ಗುರಿ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳದಲ್ಲಿ ಸರಕಾರಿ ಶಾಲೆಗಳ ಸುಮಾರು 100 ಕೊಠಡಿಗಳ ಈ ಬಾರಿ ನಿರ್ಮಿಸವ ಗುರಿ ಹೊಂದಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಮಣಿನಾಲ್ಕೂರು ಗ್ರಾಮ ದ ನಡುಮೊಗರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ  ಮಾತನಾಡಿದರು.

ನಡುಮೊಗರು ಶಾಲೆಯ ಕಟ್ಟಡ ಕಳೆದ ವರ್ಷ ಕುಸಿತಕ್ಕೊಳಗಾದ ಸಂದರ್ಭ ದಿ.ಶಿವರಾಮ ಶೆಟ್ಟಿ ನಡುಮೊಗರುಗುತ್ತು ಮನವಿಯಂತೆ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣ ನಾಲ್ಕು ಕೊಠಡಿ ಗಳ ನಿರ್ಮಾಣಕ್ಕೆ ಸೂಚನೆ ನೀಡಲಾಗಿತ್ತು. ಪ್ರಸ್ತುತ ಎಂ.ಆರ್.ಪಿ.ಎಲ್ ಹಾಗೂ ಶಾಸಕರ ನಿಧಿಯ ಮೂಲಕ ಸುಮಾರು 42 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ ಆಗಿದೆ ಎಂದವರು ಹೇಳಿದರು. ಶಾಲೆಯ ಕೊಠಡಿಗಳಿಗೆ ನೂತನ ಪೀಠೋಪಕರಣ ಗಳನ್ನು ನೀಡುವ ಭರವಸೆಯನ್ನು ಅವರು ನೀಡಿದರು.

ಜಾಹೀರಾತು

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಣಿನಾಲ್ಕೂರು ಗ್ರಾಮ ಪಂಚಾಯತ್ ಆಧ್ಯಕ್ಷೆ  ನಾಗವೇಣಿ, ಗ್ರಾ.ಪಂ.ಸದಸ್ಯರಾದ ಪ್ರೆಸಿಲ್ಲಾ ಡಿ.ಸೋಜ, ಯೋಗೀಶ್ ಶೆಟ್ಟಿ ಆರ್ಮುಡಿ, ಕಾಂಚಲಾಕ್ಷಿ, ಪುರುಷೋತ್ತಮ ಪೂಜಾರಿ,ಕುಂಬ್ರ ನಡುಮೊಗರು ಗುತ್ತು ಕೆ.ಎನ್.ಶಿವರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಶಕುಂತಲಾ ಶಿವರಾಮ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಯಿಗಿರಿದರ್ ಶೆಟ್ಟಿ,  ಉದ್ಯಮಿ ಕುಸುಮಾದರ ಶೆಟ್ಟಿ ಚೆಲ್ಲಡ್ಕ, ಪ್ರೋ. ಡಾ.ಶ್ಯಾಮಪ್ರಸಾದ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ  ಜ್ಞಾನೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ,  ಎಂ.ಆರ್.ಪಿ.ಎಲ್ ನ ಪ್ರತಿನಿಧಿ ರಾಕೇಶ್ ಕೆ, ಲಯನ್ ಗವರ್ನರ್ ವಸಂತ ಶೆಟ್ಟಿ, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಪ್ರಮುಖರಾದ ಶಾಂತಪ್ಪ ಪೂಜಾರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಕೆ.  ನಡುಮೊಗರು ಯುವಕ ಮಂಡಲದ ಅಧ್ಯಕ್ಷ ದಯಾನಂದ, ಮುಖ್ಯೋಪಾಧ್ಯಾಯ ಚಂದ್ರ ಕೆ.ಉಪಸ್ಥಿತರಿದ್ದರು. ಮಕ್ಕಳಿಗೆ ಸಮವಸ್ತ್ರ, ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಿಸಲಾಯಿತು. ಶಾಲಾ ಅಭಿವೃದ್ಧಿಗಾಗಿ ಕೊಡುಗೆ ನೀಡಿದ ವಿವಿಧ ಗಣ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ನಡುಮೊಗರು ಸರಕಾರಿ ಶಾಲೆಯಲ್ಲಿ ಬಿಸಿಯೂಟ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು. ಸಹ ಶಿಕ್ಷಕ ಮಧುಸೂದನ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಮುಖ್ಯೋಪಾಧ್ಯಾಯ ಚಂದ್ರ ಕೆ.ಧನ್ಯವಾದ ನೀಡಿದರು.  ಶಿಕ್ಷಕ  ಸಂದೇಶ್ ಎಂ.ಗೌಡ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ