ಜಿಲ್ಲಾ ಸುದ್ದಿ

‘ಮನೆಯಂಗಳದಲ್ಲಿ ಮಾನವ ಗ್ರಂಥಾಲಯ’- ಮೂರನೇ ಓದು: ಜೀವನಕಥನ ಪ್ರಸ್ತುತಪಡಿಸಿದರು ಶಿವಪ್ರಸಾದ್ ಆಳ್ವ ನಡಿಗುತ್ತು

ಇಬ್ರಾಹಿಂ ನಡುಪದವು ಮನೆಯಂಗಳದಲ್ಲಿ ಕಾರ್ಯಕ್ರಮ

ಮನೋಸ್ಥೈರ್ಯ ಮತ್ತು ಸಕಾಲಿಕ ಚಿಕಿತ್ಸೆಯಿಂದ ಮಾರಕ ರೋಗ ಕ್ಯಾನ್ಸರನ್ನು ಗೆಲ್ಲಬಹುದೆಂದು ಸ್ವತಃ ಕ್ಯಾನ್ಸರನ್ನು ಎದುರಿಸಿ ಗೆದ್ದ ಶಿವಪ್ರಸಾದ್ ಆಳ್ವ ನಡಿಗುತ್ತು ಹೇಳಿದ್ದಾರೆ.

ಜನಶಿಕ್ಷಣ ಟ್ರಸ್ಟ್, ಜನಜೀವನ ಬಾಳೆಪುಣಿ, ಚಿತ್ತಾರ ಬಳಗ, ಸ್ಮೈಲ್ ಟ್ರಸ್ಟ್ ಹಾಗೂ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಇಬ್ರಾಹಿಂ ನಡುಪದವು ಮನೆಯಂಗಳದಲ್ಲಿ ನಡೆದ ಮಾನವ ಗ್ರಂಥಾಲಯ ದಲ್ಲಿ ಅವರು ಮನುಷ್ಯ ಪುಸ್ತಕವಾಗಿ ತನ್ನ ಜೀವನ ಕಥನವನ್ನು ನಿರೂಪಿಸಿದರು.

ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತಾಯಿ, ಶಿಕ್ಷಕರ ಮತ್ತು ಸ್ನೇಹಿತರ ಮಾತು ಮತ್ತು ಮಾರ್ಗದರ್ಶನದಿಂದ ಪರಿವರ್ತನೆಗೊಂಡು ಉದ್ಯಮಿಯಾಗಿ, ಸಾಹಿತಿಯಾಗಿ, ರಂಗಕರ್ಮಿಯಾಗಿ, ಪ್ರಗತಿಪರ ಚಿಂತಕರಾಗಿ ಹೊಸ ಬದುಕನ್ನು ಕಟ್ಟಿದ ರೀತಿಯನ್ನು ಅವರು ಆಸಕ್ತ ‘ಮನುಷ್ಯ ಪುಸ್ತಕ’ ಓದುಗರ ಜತೆ ಹಂಚಿಕೊಂಡರು.

ಜನಜೀವನ ಬಾಳೆಪುಣಿ ಇದರ ಅಧ್ಯಕ್ಷ ರಮೇಶ ಶೇಣವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಿದ್ದರು. ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಜೀವನ ಕಥನಕ್ಕೆ ಪ್ರತಿಕ್ರಿಯಿಸಿ ಆಳ್ವರು ಕೇಳುಗರನ್ನು ಹೊಸ ಚಿಂತನೆಗೆ ಕರೆದೊಯ್ದಿದ್ದಾರೆ ಎಂದರು. ಚಂದ್ರಶೇಖರ ಪಾತೂರು ಪುಸ್ತಕ ವನ್ನು ಪರಿಚಯಿಸಿದರು. ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಹೈದರ್ ಕೈರಂಗಳ ವಂದಿಸಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಒಂಬಡ್ಸ್ ಮೆನ್ ಶೀನ ಶೆಟ್ಟಿ, ರಾಧಾಕೃಷ್ಣ ರೈ ಉಮಿಯ, ಪುಂಡರೀಕಾಕ್ಷ, ಚಂದ್ರಹಾಸ ಕಣಂತೂರು, ಕೆ.ಶ್ಯಾಮ್ ಭಟ್,ಸತೀಶ್ ಇರಾ, ಸ್ಥಳೀಯ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಸೇವಾ ಕಾರ್ಯಕರ್ತರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಗುರುವಪ್ಪ ಎನ್.ಟಿ ಬಾಳೆಪುಣಿ ಇವರನ್ನು ಸನ್ಮಾನಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts