ಬಂಟ್ವಾಳ

ಎಬಿವಿಪಿ ಬಂಟ್ವಾಳ ತಾಲೂಕು ಅಭ್ಯಾಸ ವರ್ಗ

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ಅಭ್ಯಾಸ ವರ್ಗ ಬಿ.ಸಿ ರೋಡಿನ ಗೀತಾಂಜಲಿ ಸಬಾ ಭವನದಲ್ಲಿ ನಡೆಯಿತು.

ನಿವೃತ್ತ ಯೋಧ ಡಾ. ಡಾ. ವೆಂಕಟೇಶ್ ಕುಂಪಲ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಲಕ್ಷ್ಮೀ ಮಠದಮೂಲೆ, ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್ ಶೆಣೈ ಉಪಸ್ಥಿತರಿದ್ದರು. ಅಭ್ಯಾಸ ವರ್ಗದ ಮೊದಲ ಅವದಿ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ನಡೆಸಿಕೊಟ್ಟರು.ಎರಡನೇ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವವನ್ನು ಹಿರಿಯ ಕಾರ್ಯಕರ್ತರಾದ ಸಂದೇಶ್ ರೈ ಮಜಕ್ಕಾರ್ ನಡೆಸಿಕೊಟ್ಟರು. ಅಭ್ಯಾಸ ವರ್ಗದ ಮೂರನೇ ಅವಧಿಯನ್ನು ಚಟುವಟಿಕೆಗಳ ಪ್ರಾತ್ಯಕ್ಷಿಕೆಯ ಮೂಲಕ ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನಡೆಸಿಕೊಟ್ಟರು.

ಜಾಹೀರಾತು

ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಬಿವಿಪಿ ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನೂತನ ತಾಲೂಕು ತಂಡ ಮತ್ತು ನಗರ ತಂಡಗಳ ಜವಾಬ್ದಾರಿ ಘೋಷಣೆ ಮಾಡಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಸಂಚಾಲಕ ದಿನೇಶ್ ಕೊಯಿಲ, ಸಹ ಸಂಚಾಲಕ ಅಖಿಲಾಶ್ ಉಪಸ್ಥಿತರಿದ್ದರು. ಸಿದ್ದಕಟ್ಟೆ ನಗರ ಕಾರ್ಯದರ್ಶಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಆಗಮಿಸಿ ಶುಭ ಕೋರಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts