ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ದೈವಸ್ಥಾನ ಮತ್ತು ನಿರ್ಮಾಲ್ ಶ್ರೀ ಕಲ್ಲುರ್ಟಿ ಕಲ್ಕುಡ ಹಾಗೂ ರಕ್ತೇಶ್ವರಿ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾಣಿಮಜಲು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ದೈವಸ್ಥಾನದಲ್ಲಿ ಭಾನುವಾರ ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆಯಿತು. ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ನಮ್ಮ ಪರಂಪರೆಯನ್ನು ಉಳಿಸುವ ಕಾರ್ಯ ಭಕ್ತರ ನೆರವಿನಿಂದ ದೈವಸ್ಥಾನ, ದೇವಸ್ಥಾನಗಳ ಬ್ರಹ್ಮಕಲಶೋತ್ಸವಗಳ ಮೂಲಕ ಆಗುತ್ತಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬ್ರಹ್ಮಕಲಶೋತ್ಸವ ದೇವರಿಗೆ, ದೈವಗಳಿಗಷ್ಟೇ ಅಲ್ಲ, ನಮಗೆ ಆಗಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ದೇವರು, ದೈವಗಳು ಬಯಸಿದಂತೆ ಕ್ಷೇತ್ರಗಳು ಅಭಿವೃದ್ಧಿಗೊಳ್ಳುತ್ತವೆ. ಈ ಹಂತದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದೇವೆ ಎಂದರು.ಸಂಸದ ನಳಿನ್ ಕುಮಾರ್ ಕಟೀಲ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ರಮಾನಾಥ ರೈ ಶುಭ ಹಾರೈಸಿದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಜಿಪಂ ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗ್ರಾಪಂ ಮಾಜಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಎನ್.ಪ್ರಕಾಶ ಕಾರಂತ, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಘುನಾಥ ಸೋಮಯಾಜಿ ಎರಕಳ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಘು ಸಪಲ್ಯ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಗಾಣಿಗ, ಸಂಚಾಲಕ ಎನ್. ಪದ್ಮನಾಭ ಮಯ್ಯ, ಕೋಶಾಧಿಕಾರಿ ರಮೇಶ್ ಬೋರುಗುಡ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ, ,ಗ್ರಾಪಂ ಅಧ್ಯಕ್ಷೆ ವಿನಿತಾ ಪುರುಷೋತ್ತಮ್, ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಕೊರಗಪ್ಪ ಬಂಗೇರ, ನಿತಿನ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಹೊಸಲಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಭಾನುವಾರ ಬೆಳಿಗ್ಗೆ 10.42 ರ ಶುಭಮುಹೂರ್ತದಲ್ಲಿ ತಂತ್ರಿವರೇಣ್ಯರಾದ ವಾಸುದೇವ ಕಾರಂತರ ನೇತೃತ್ವದಲ್ಲಿ ನಡೆಯಿತು. ಇದಕ್ಕು ಮುನ್ನ ಅಷ್ಟೋತ್ತರ ಶತನಾಳಿಕೇರ ಯಾಗವು ನೆರವೇರಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ ಸಮಿತಿ ಗೌರವಾಧ್ಯಕ್ಷರಾದ ರಘುನಾಥ ಸೋಮಯಾಜಿ ಎರಕಳ,ರಘು ಸಪಲ್ಯ,ಸಂಚಾಲಕ ಪದ್ಮನಾಭ ಮಯ್ಯ ಎಲಬೆ,ಪದಾಧಿಕಾರಿಗಳಾದ ಕೃಷ್ಣಪ್ಪ ಗಾಣಿಗ ಮಾಣಿಮಜಲು,ರಮೇಶ್ ಬೋರುಗುಡ್ಡೆ,ಪ್ರೇಮನಾಥ ಶೆಟ್ಟಿ ಅಂತರ,ಲಕ್ಷ್ಮಣ ಪೂಜಾರಿ, ಪುರುಷೋತ್ತಮ ಸಾಲಿಯಾನ್ ,ಕೊರಗಪ್ಪ ಬಂಗೇರ ಕೆದ್ದೇಲ,ಕೇಶವ ಕೋಡಿ,ಉದಯಕುಮಾರ್ ಶೆಟ್ಟಿ,ನವೀನ್ ಕುಮಾರ್,ಯಶೋಧರ ಕರ್ಬೆಟ್ಟು,ರಾಜೇಶ್ ನಿರ್ಮಾಲ್, ಶ್ರೀರಾಯಷ,ರಂಜಿತ್ ಕೆದ್ದೇಲ್ ,ಜಯರಾಜ್ ಪಲ್ಲತ್ತಿಲ,ಮಾಧವ ಕರ್ಬೆಟ್ಟು, ನವೀನ್ ಕುಮಾರ್,ಮೋನಪ್ಪ ದೇವಸ್ಯ,ಸುರೇಶ್ ಕೋಟ್ಯಾನ್, ರಮಾನಾಥ ರಾಯಿ,ಕೇಶವ ಶಾಂತಿ,ಕಿಶೋರ್ ಶೆಟ್ಟಿ ಮಹೇಶ್ ರಾಯಸ,ಗಿರಿಜಮ್ಮ ನರಿಕೊಂಬು,ಗೋವರ್ಧನ ಶೆಣೈ ಪಾಣೆಮಂಗಳೂರು, ಸಮಿತಿಯ ಸರ್ವ ಸದಸ್ಯರು,ನಾಲ್ಕುಗುತ್ತು-ನಾಲ್ಕು ಮನೆ ಮತ್ತು ನಿರ್ಮಲ್ ಕುಟುಂಬಸ್ಥರು ಹಾಗೂ ಭಕ್ತ ಸಮೂಹ ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಬಿ.ಸಿ.ರೋಡಿನ ಗಜಲಕ್ಷ್ಮೀ ಕ್ರೇನ್ ಸಹಾಯದಿಂದ ಗೋಪುರಕಲಶವನ್ನು ಸ್ಥಾಪಿಸಲಾಯಿತು. ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದವು ವಾಸ್ತುಶಿಲ್ಪಿ ಬೆದ್ರಡ್ಕ ಶ್ರೀ ರಮೇಶ ಕಾರಂತರ ಮಾರ್ಗದರ್ಶನದಲ್ಲಿ ಪುನರ್ ನಿರ್ಮಾಣಗೊಂಡ ಸಾನಿಧ್ಯದಲ್ಲಿ ಸ್ಥಳೀಯ ತಂತ್ರಿಗಳಾದ ವಾಸುದೇವ ಕಾರಂತರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. 29ರಂದು ನಿರ್ಮಾಲ್ ಸ್ಥಾನದಲ್ಲಿ ಶ್ರೀ ರಕ್ತೇಶ್ವರಿ ಕಲ್ಲುರ್ಟಿ ಕಲ್ಕುಡ ದೈವಗಳ ಪ್ರತಿಷ್ಠೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.