ಬಂಟ್ವಾಳ

ವಿಟ್ಟ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ಧತೆ: ಸೋಮವಾರ ಮತದಾನ, ಮೊಡಂಕಾಪುವಿನಲ್ಲಿ ಮಸ್ಟರಿಂಗ್ ಕಾರ್ಯ

ಸೋಮವಾರ ಚುನಾವಣೆ, ಗುರುವಾರ ಮತ ಎಣಿಕೆ

ಬಂಟ್ವಾಳನ್ಯೂಸ್ ವರದಿ, www.bantwalnews.com REPORT

ಬಂಟ್ವಾಳ: ವಿಟ್ಲ ಪಟ್ಟಣ ಪಂಚಾಯಿತಿಯ 18 ವಾರ್ಡುಗಳಿಗೆ ಚುನಾವಣೆ ಸೋಮವಾರ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ಭಾನುವಾರ ನಡೆಯಿತು. ಚುನಾವಣೆ ಬಳಿಕ ಇದೇ ಜಾಗದಲ್ಲಿ ಡಿ.30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಗ್ರೇಡ್ 2 ತಹಸೀಲ್ದಾರ್ ಕವಿತಾ, ಉಪತಹಸೀಲ್ದಾರ್ ಗಳಾದ ನವೀನ್ ಬೆಂಜನಪದವು, ರಾಜೇಶ್ ನಾಯ್ಕ್, ನರೇಂದ್ರನಾಥ ಭಟ್ ಮಿತ್ತೂರು, ಕಂದಾಯ ನಿರೀಕ್ಷಕರಾದ ಧರ್ಮ ಸಾಮ್ರಾಜ್ಯ, ಕುಮಾರ್ ಟಿ.ಸಿ., ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದು, ಚುನಾವಣಾ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.

ಜಾಹೀರಾತು

42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಎಸ್.ಡಿ.ಪಿ.ಐ. ಕೆಲ ವಾರ್ಡ್ ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಇಬ್ಬರು ಪಕ್ಷೇತರರೂ ಕಣದಲ್ಲಿದ್ದಾರೆ. 7161 ಮಂದಿ ಪುರುಷ ಮತದಾರರು, 7554 ಮಂದಿ ಮಹಿಳಾ ಮತದಾರರು ಸೇರಿದಂತೆ 14,715 ಮಂದಿ ಮತದಾರರಿದ್ದು, 18 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಪಿಆರ್‍ಒ, ಎಪಿಆರ್‍ಒ ಹಾಗೂ ಪಿಒ ಸಹಿತ ಒಟ್ಟು 88 ಮಂದಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಇವರು: 1ನೇ ವಾರ್ಡ್‌ನ ಕಾಂಗ್ರೆಸ್ ವಿ. ಮಹಮ್ಮದ್ ಅಶ್ರಫ್, ಬಿಜೆಪಿ ಕೃಷ್ಣಪ್ಪ ಗೌಡ, 2ನೇ ವಾರ್ಡ್ ಕಾಂಗ್ರೆಸ್ ಕಮಲಾಕ್ಷಿ, ಬಿಜೆಪಿ ಸಂಗೀತ, ಎಸ್. ಡಿ. ಪಿ. ಐ. ಆಯಿಷ ಎನ್.,  3ನೇ ವಾರ್ಡ್ ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ, ಬಿಜೆಪಿ ಸಿ.ಎಚ್.ಜಯಂತ, 4ನೇ ವಾರ್ಡ್ ಕಾಂಗ್ರೆಸ್ ಆಯಿಷಾ, ಬಿಜೆಪಿ ರಕ್ಷಿತ, 5ನೇ ವಾರ್ಡ್ ಕಾಂಗ್ರೆಸ್ ವಸಂತಿ, ಬಿಜೆಪಿ ವಸಂತ ಕೆ., 6ನೇ ವಾರ್ಡ್ ಕಾಂಗ್ರೆಸ್ ಲೀಲಾವತಿ, ಬಿಜೆಪಿ ವಿಜಯಲಕ್ಷ್ಮಿ, 7ನೇ ವಾರ್ಡ್ ಕಾಂಗ್ರೆಸ್ ಶಿವಪ್ರಸಾದ್ ವಿ., ಬಿಜೆಪಿ ರವಿಪ್ರಕಾಶ್ ಯಸ್., 8ನೇ ವಾರ್ಡ್ ಕಾಂಗ್ರೆಸ್ ಸುನೀತ ಕೊಟ್ಯಾನ್, ಬಿಜೆಪಿ ಸುನೀತಾ, ಎಸ್. ಡಿ. ಪಿ. ಐ  ರಝೀಯಾ, 9 ನೇ ವಾರ್ಡ್ ಕಾಂಗ್ರೆಸ್ ಶಿವಪ್ರಸಾದ್, ಬಿಜೆಪಿ ಎನ್. ಕೃಷ್ಣ,, 10ನೇ ವಾರ್ಡ್ ಕಾಂಗ್ರೆಸ್ ಪದ್ಮ, ಬಿಜೆಪಿ ಸುಮತಿ, 11ನೇ ವಾರ್ಡ್ ಕಾಂಗ್ರೆಸ್ ರಮಾನಾಥ ವಿ, ಬಿಜೆಪಿ ಅರುಣ್ ಎಂ, ಪಕ್ಷೇತರ ಜಾನ್ ಡಿಸೋಜ, 12ನೇ ವಾರ್ಡ್ ಕಾಂಗ್ರೆಸ್ ಎಂ. ಕೆ. ಮೂಸಾ, ಬಿಜೆಪಿ ಹರೀಶ್ ಸಿ. ಎಚ್., 13ನೇ ವಾರ್ಡ್ ಕಾಂಗ್ರೆಸ್ ಅಸ್ಮ ಯು.ಕೆ, ಬಿಜೆಪಿ ಪುಷ್ಪಾ, ಎಸ್.ಡಿ.ಪಿ.ಐ. ಶಾಕೀರ, 14ನೇ ವಾರ್ಡ್ ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ, ಪಕ್ಷೇತರ ಮೋಹನ್ ಸೇರಾಜೆ, 15ನೇ ವಾರ್ಡ್ ಕಾಂಗ್ರೆಸ್ ಲತಾವೇಣಿ, ಬಿಜೆಪಿ ಸಂಧ್ಯಾಗಣೇಶ್, 16ನೇ ವಾರ್ಡ್ ಕಾಂಗ್ರೆಸ್ ಡೀಕಯ್ಯ, ಬಿಜೆಪಿ ಕೃಷ್ಣಪ್ಪ, 17ನೇ ವಾರ್ಡ್ ಕಾಂಗ್ರೆಸ್ ಶ್ರೀಚರಣ್, ಬಿಜೆಪಿ ಕರುಣಾಕರ, 18ನೇ ವಾರ್ಡ್ ಕಾಂಗ್ರೆಸ್ ಅಬ್ದುಲ್ ರಹಿಮನ್, ಬಿಜೆಪಿ ಕೃಷ್ಣಪ್ಪ ಮೂಲ್ಯ, ಎಸ್.ಡಿ.ಪಿ.ಐ. ಸಯ್ಯದ್ ಇಲ್ಯಾಸ್.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ