ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಸುಳ್ಯದ ಕೊಡಂಚಿಕಾರ್ ಕ್ಷೇತ್ರದ ತುಳು ಭಕ್ತಿಗೀತೆಯನ್ನು ಕೊಡಂಚಿಕಾರ್ ಶ್ರೀ ಕ್ಷೇತ್ರದಲ್ಲಿ ಕ್ಷೇತ್ರದ ಧರ್ಮದರ್ಶಿ ಕೃಷ್ಟಪ್ಪ ಕೊಡಂಚಿಕಾರ್,ಹಿರಿಯರಾದ ಅಮ್ಮುಪೂಂಜಾ, ಪ್ರವೀಣ, ಚೋಮಯ್ಯ, ಕಮಲಾಕ್ಷಿ, ಕೂಸ ಮಡಿಕೇರಿ ಗೌರವ ಉಪಸ್ಥಿತಿ ಹಾಗೂ ಭಕ್ತರ ಸಮ್ಮುಖದಲ್ಲಿ ಉಪ ತಾಹಶೀಲ್ದಾರರು ಸಮಾಜಸೇವಕರಾದ ಜಯ ವಿಕ್ರಮ್ ರಾಮಕುಂಜ ಬಿಡುಗಡೆಗೊಳಿಸಿದರು. ಮಧ್ವೀರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡ ಈ ಭಕ್ತಿಗೀತೆಯು ಜಯಪ್ರಕಾಶ್ ಕನ್ಯಾಡಿ ನಿರ್ಮಾಣದಲ್ಲಿ ಆದಿತ್ಯ ಕಾಶಿಪಟ್ನ ಗಾಯನದಲ್ಲಿ, ನಮ್ಮೂರ ಸುದ್ದಿ ಚಾನೆಲ್ ನ ನಿತಿನ್ ಕನ್ಯಾಡಿ ಸಂಕಲನ ಹಾಗೂ ಕರುನಾಡ ಗಾನ ಗಂಧರ್ವ ಮಿಥುನ್ ರಾಜ್ ವಿದ್ಯಾಪುರ ಇವರ (ಶ್ರೀ ರಾಜ್ ಸ್ಟುಡಿಯೋ ) ಇವರ ಧ್ವನಿ ಸಂಯೋಜನೆ, ಸುರೇಶ್ ಎಸ್. ನಾವೂರು ಸಾಹಿತ್ಯದಲ್ಲಿ ಮೂಡಿ ಬಂದಿದೆ. ಕಾರ್ಯಕ್ರಮದಲ್ಲಿ ಭಕ್ತಿಗೀತೆಯ ಗಾಯಕ ಹಾಗೂ ಸಾಹಿತಿಯನ್ನು ಸನ್ಮಾನಿಸಲಾಯಿತು. ಗಾಯಕ ಮಾಸ್ಟರ್ ಆದಿತ್ಯನಿಗೆ ಈ ಭಕ್ತಿಗೀತೆಯ ನಿರ್ಮಾಪಕರು ಆದ ಜಯಪ್ರಕಾಶ್ ಕನ್ಯಾಡಿ ಇವರು ಅತ್ಯುತ್ತಮ ಕಂಪನಿಯ ಕೀ ಬೋರ್ಡ್ ನ್ನು ಉಡುಗೊರೆಯಾಗಿ ನೀಡಿದರು.