ಜಿಲ್ಲಾ ಸುದ್ದಿ

ಇಂದಬೆಟ್ಟುವಿನಲ್ಲಿ ನಡೆದ ಕಳವು ಪ್ರಕರಣ ಮೂವರು ಆರೋಪಿಗಳ ಬಂಧನ, ಸೊತ್ತು ವಶಕ್ಕೆ

ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

ಬೆಳ್ತಂಗಡಿ: ಇಂದಬೆಟ್ಟು ದೇರಾಜೆ ಮನೆಯ ಮಹಮ್ಮದ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಕ್ಷಾಂತರ ರೂ ಮೌಲ್ಯದ ಆಭರಣ ಸಹಿತ ಸೊತ್ತುಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ 1 ) ಮಹಮ್ಮದ್ ಸ್ವಾಲಿ (26) ನಾವೂರು ಗ್ರಾಮ , ಬೆಳ್ತಂಗಡಿ ತಾಲೂಕು , 2 ) ಯಾಹ್ಯಾ (32) ಲಾಯಿಲಾ ಗ್ರಾಮ , ಬೆಳ್ತಂಗಡಿ ತಾಲೂಕು 3 ) ಬಿ.ಎಚ್ ನೌಫಲ್ (27) ನಾವೂರು ಗ್ರಾಮ ಅವರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರು , ಪಲ್ಸರ್ ಎನ್ ಎಸ್ ಮೋಟಾರು ಸೈಕಲ್ , ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ (ಇವುಗಳ ಒಟ್ಟು ಮೌಲ್ಯ 1,69,500 ರೂಗಳು) , , ಹಾಗೂ ಕಳವಾದ 12,05,200 ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣಗಳು, ನಗದು 1230 ರೂ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಋಷಿಕೇಶ್ ಭಗವಾನ್, ಹೆಚ್ಚುವರಿ ಅಧೀಕ್ಷಕ ಶಿವಕುಮಾರ್ ಗುಣಾರೆ, ನಿರ್ದೇಶನದಂತೆ ಎಎಸ್ಪಿ ಶಿವಾಂಶು ರಜಪೂತ್ ಸೂಚನೆಯಂತೆ ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ, ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ನಂದಕುಮಾರ್, ಪ್ರೊಬೆಷನರಿ.ಪಿಎಸ್‌ಐ ಮೂರ್ತಿ, ಎಎಸೈ ದೇವಪ್ಪ, ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್ , ವೃಷಭ , ಪ್ರಮೋದ್ ನಾಯ್ಕ , ಇಬ್ರಾಹಿಂ ಗರ್ಡಾಡಿ , ಲತೀಫ್ , ವಿಜಯ ಕುಮಾರ್ ರೈ , ವೆಂಕಟೇಶ್ , ಬಸವರಾಜ್ , ಚರಣ್ , ಅವಿನಾಶ್, ವಾಹನ ಚಾಲಕರಾದ ಮಹಮ್ಮದ್ ಆಸೀಫ್ , ಸತೀಶ್, ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಲಾಯಿತು.

ಜಾಹೀರಾತು

ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 13,75,930 ರೂಪಾಯಿ ಆಗಿದ್ದು , ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಅಕ್ಟೋಬರ್ 31ರಂದು ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ 13 ಪವನಿನ ಚಿನ್ನದ ನೆಕ್ಲೀಸ್ 01 , ಒಂದು ಪವನಿನ ಚಿನ್ನದ ಚೈನ್ – 01 , ಒಂದು ಪವನಿನ ಚಿನ್ನದ ಸಣ್ಣ ಚೈನ್ – 01 , ಒಂದೂವರೆ ವವನಿನ ಚಿನ್ನದ ಮಕ್ಕಳ ಚೈನ್ – 02 , ತಲಾ ಒಂದು ಒಂದು ಪವನಿನ ಚಿನ್ನದ ಕಾಯಿನ್ಸ್ – 04 , ತಲಾ ನಾಲ್ಕು ಪವನಿನ ಚಿನ್ನದ ಬಿಸ್ಕೆಟ್ – 04 – ಎರಡು ಪವನಿನ ಚಿನ್ನದ ಗಟ್ಟಿ – 01 ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್ – 01 : ಅರ್ಧ ಪವನಿನ ಚಿನ್ನದ ತುಂಡಾದ ಬಳೆ ಹಾಗೂ ಪೆಂಡೆಂಟ್ – 01 , ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ -01 ಜೊತೆ , ಮುಂತಾದ ಸುಮಾರು 12,05,200 ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವಾಗಿದ್ದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ