ಬಂಟ್ವಾಳ: ಇಲ್ಲಿನ ಪಂಜಿಕಲ್ಲು ಎಂಬಲ್ಲಿ ರೂ 2.5 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಆದಿನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಮಾನಸ್ತಂಭ ಕಲ್ಲಿನ ಕೆತ್ತನೆಗೆ ಶುಕ್ರವಾರ ಚಾಲನೆ ನೀಡಲಾಯಿತು. ವಿವರಗಳಿಗೆ ಮುಂದೆ ಓದಿರಿ.
ಏಕಶಿಲಾ ಮಾನಸ್ಥಂಭ’ವು ದೊಡ್ಡಬಳ್ಳಾಪುರದಿಂದ ಸೋಮವಾರ ಆಗಮಿಸಿದೆ. ಪಂಜಿಕಲ್ಲುಪದವು ಎಂಬಲ್ಲಿ ಸೋಮವಾರ ಅದ್ದೂರಿ ಸ್ವಾಗತ ನೀಡಿದ ಬಳಿಕ ಆಕರ್ಷಕ ಮೆರವಣಿಗೆಯಲ್ಲಿ ಬಸದಿಗೆ ಮಾನಸ್ಥಂಭ ಕರೆ ತರಲಾಯಿತು. ನಿವೃತ್ತ ಪ್ರಾಂಶುಪಾಲ ರಾಜವೀರ ಇಂದ್ರ ಬಳ್ಳಮಂಜ ಮೆರವಣಿಗೆಗೆ ಚಾಲನೆ ನೀಡಿದರು. ಶ್ರಾವಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಪಂಜಿಕಲ್ಲು ಬಸದಿ ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಮುಂಬರುವ ಫೆಬ್ರವರಿ ತಿಂಗಳು ಬಸದಿ ಪುನರ್ ನಿಮರ್ಾಣ ಕಾಮಗಾರಿ ಪೂರ್ಣಗೊಂಡು ಪಂಚಕಲ್ಯಾಣೋತ್ಸವ ನಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು 16 ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ 32 ಅಡಿ ಎತ್ತರದ ಏಕಶಿಲಾ ಮಾನಸ್ಥಂಭ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ರಾಷ್ಟ್ರೀಯ ಜೈನ್ ಮಿಲನ್ ಕಾಯರ್ಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಬಸದಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ ಎಂದರು. ಆಡಳಿತ ಸಮಿತಿ ಕಾರ್ಯದಶರ್ಿ ದೇವ ಕುಮಾರ್ ಇಂದ್ರ, ಪ್ರಮುಖರಾದ ನಿರಂಜನ್ ಜೈನ್ ಅಂತರ, ಸತೀಶ ಕುಮಾರ್ ಅಗರಿ, ಹಷರ್ೇಂದ್ರ ಜೈನ್ ಅಂತರ, ಚಂದ್ರಶೇಖರ ಇಂದ್ರ, ರತ್ನವರ್ಮ ಇಂದ್ರ, ಸುಭಾಶ್ಚಂದ್ರ ಜೈನ್ ಬಂಟ್ವಾಳ, ರಾಜೇಶ ಜೈನ್ ಪಡ್ರಾಯಿ, ಕೃಷ್ಣರಾಜ್ ಜೈನ್, ಜಿನಚಂದ್ರ ಜೈನ್, ಡಾ.ಶ್ರೀಮಂದರ ಜೈನ್, ಪದ್ಮಸ್ಮಿತ್ ಜೈನ್ ಹಿಣರ್ಿ, ಜಿತೇಂದ್ರ ಜೈನ್, ಮಹಾವೀರ ಜೈನ್ ಸಿದ್ಧಕಟ್ಟೆ, ವಿದ್ಯಾ ಕುಮಾರ್ ಇಂದ್ರ, ಮಧ್ವರಾಜ್ ಜೈನ್ ಸಿದ್ಧಕಟ್ಟೆ, ಪಾಂಡಿರಾಜ್ ಜೈನ್ ಪುಚ್ಚೇರು ಸಹಿತ ಸ್ಥಳೀಯ ನಾಗರಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮಾನಸ್ತಂಭ ದಾನಿ ರಾಜೇಂದ್ರ ಜೈನ್ ದಂಪತಿ ತುಮಕೂರು, ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ದೇವಕುಮಾರ್ ಇಂದ್ರ, ಹಷೇಂದ್ರ ಜೈನ್ ಅಂತರ, ಭರತ್ ರಾಜ್ ಜೈನ್ ವೇಣೂರು, ಡಾ.ಸುದೀಪ್ ಕುಮಾರ್ ಸಿದ್ಧಕಟ್ಟೆ, ಶ್ರೇಯಾಂಸ ಜೈನ್ ಅಟ್ಲೊಟ್ಟು, ವಿದ್ಯ ಕುಮಾರ್ ಇಂದ್ರ, ರವೀಂದ್ರ ಜೈನ್ ಪಡ್ರಾಯಿ, ಶಿಲ್ಪಿ ಶ್ರೀನಿವಾಸ್ ಮತ್ತಿತರರು ಇದ್ದರು.
ಜಾಹೀರಾತು
ಜಾಹೀರಾತು
Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.