ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರವೂ ಮಳೆ ಜೊತೆಗೆ ಗಾಳಿ ಉಪಟಳ ಮುಂದುವರಿದಿದ್ದು ಹಲವೆಡೆ ಹಾನಿಗಳು ಸಂಭವಿಸಿದ ಕುರಿತು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಕೊಯ್ಲ ಗ್ರಾಮದ ಶೇಖರ್ ಅಂಚನ್ ಅವರ ಬತ್ತದ ಕೃಷಿಗೆ ಹಾನಿ, ಪಿಲಿಮೊಗರು ಗ್ರಾಮದಲ್ಲಿ ಹಲವು ಕೃಷಿ ಮತ್ತು ಮನೆಗಳಿಗೆ ಹಾನಿ ಉಂಟಾಗಿದೆ. ಅಪ್ಪಿ ಪೂಜಾರಿ ಅವರ ಮನೆಗೆ ಭಾಗಶಃ ಹಾನಿ, ಮಾಧವ ಭಟ್ ಅವರ ಅಡಕೆ ತೋಟಕ್ಕೆ ಹಾನಿ, ಅಪ್ಪಿ ಪೂಜಾರಿ ಅವರ ಅಡಕೆ ತೋಟಕ್ಕೆ ಹಾನಿ, ಬಲ್ಲಿದಕೋಡಿ ಎಂಬಲ್ಲಿ ಆನಂದ ಪೂಜಾರಿ ಮನೆಗೆ ಹಾನಿ, ರಮೇಶ್ ಶೆಟ್ಟಿ ತೋಟಕ್ಕೆ ಹಾನಿ, ಶೀನ ಶೆಟ್ಟಿ ಅವರ ಮನೆಗೆ ಭಾಗಶಃ ಹಾನಿ, ಪಿಲಿಮೋಗರು ಗ್ರಾಮದ ಬಲ್ಲಿದಕೋಡಿ ಎಂಬಲ್ಲಿ ಆನಂದ ಪೂಜಾರಿ ಬಿನ್ ಚೀಂಕ್ರ ಪೂಜಾರಿಯವರ ಪಕ್ಕಾ ಮನೆ ಭಾಗಶಃ ಹಾನಿಯಾಗಿರುತ್ತದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…