ಬಂಟ್ವಾಳ: ಪಂಡಿತ್ ದಿನ್ ದಯಾಳ್ ಉಪಾದ್ಯಾಯ ಜನರ ಪರಿಸ್ಥಿತಿ ಅರ್ಥೈಸಿಕೊಂಡು ಅಂತ್ಯೋದಯದ ಕಲ್ಪನೆಯನ್ನು ದೇಶಕ್ಕೆ ಸಾರಿದರು. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಕಲ್ಪನೆ ಸಾಕಾರಗೊಳಿಸಿದ್ದಾರೆ ಎಂದು ಕಾವಳಪಡೂರು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 105 ನೇ ಜನ್ಮದಿನದ ಆಚರಣೆಯನ್ನು ಕರ್ಪೆ ಗ್ರಾಮದ ಬುತ್ ನಂಬರ್ 1 ಮತ್ತು 2 ರಲ್ಲಿ ಪ್ರತ್ಯೇಕವಾಗಿ ಜರಗಿದ ಕಾರ್ಯಕ್ರಮದಲ್ಲಿ ಉಪಾಧ್ಯಾಯರ ಜೀವನ ಚರಿತ್ರೆ ಬಗ್ಗೆ ಬೌದ್ಧಿಕ್ ನೀಡಿದರು.ಕರ್ಪೆ ಬೂತ್ ಸಮಿತಿ ಪ್ರಭಾರಿ ಹಾಗೂ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಆಚಾರ್ಯ ಸೇವೆ ಮತ್ತು ಸಮರ್ಪಣೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಯಾವರಿಗೆ ಹುಟ್ಟು ಹಬ್ಬದ ಶುಭಾಶಯ ಮತ್ತು ಅವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಧನ್ಯವಾದಗಳನ್ನು ಅರ್ಪಿಸುವ ಅಂಚೆ ಕಾರ್ಡ್ ಬರೆದು ಕಳುಹಿಸಲಾಯಿತು.ಮೋದಿಜೀ ಯಾವರ” ನಮೋ ಆಪ್ ಡೌನ್ ಲೋಡ್ ಮಾಡಲಾಯಿತು ಬೂತ್ ಸಮಿತಿ ,ಪ್ರದಾನ ಕಾರ್ಯದರ್ಶಿಗಳಾದ ರಂಜಿತ್ ಪೂವಳ,ಹರೀಶ್ ಶೆಟ್ಟಿಬೆಟ್ಟು, ದಾಮೋದರ ನಾಯ್ಕ,, ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾ ಪ್ರಭು, ಹೇಮಲತಾ ನಾಯ್ಕ್, ರಾಜೀವಿ ಕೋಟಿಯಪ್ಪ ಪೂಜಾರಿ,ರಾಮಕೃಷ್ಣ ನಾಯಕ್, ಸುಬ್ರಮಣ್ಯ ಪವನಾಸ್ಕರ್ ದೋಟ, ಸುಂದರ ಪೂಜಾರಿ ನೆಕ್ಲಾಜೆ,ಭಾಸ್ಕರ ಪ್ರಭು, ಕೃಷ್ಣ ಪ್ರಭು, ಕೆ. ನಾರಾಯಣ ನಾಯಕ್, ಕೃಷ್ಣಪ್ಪ ಪೂಜಾರಿ,ಅಶೋಕ್ ಪ್ರಭು,ಹರೀಶ್,, ಪೂರ್ಣಿಮಾ, ಸುಜಿತ್ ಪೂವಳ, ದಾಮೋದರ್ ಪೂಜಾರಿ ಮಂದಿರ, ಹಾಗೂ ಬೂತ್ ಸಮಿತಿ ಪಧಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಬುತ್ 01 ಅಧ್ಯಕ್ಷ ತೇಜಸ್ ಸ್ವಾಗತಿಸಿ, ಬುತ್ 2 ರ ಅಧ್ಯಕ್ಷ ನವೀನ್ ಪೂಜಾರಿ ವಂದಿಸಿದರು/