ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ನ ಅಧ್ಯಕ್ಷ ರಾಘವೇಂದ್ರ ಭಟ್ ನೇತೃತ್ವದಲ್ಲಿ ವಿಶ್ವ ಔಷಧಿದಾರರ ದಿನಾಚರಣೆಯ ಪ್ರಯುಕ್ತ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕುಲಾವು ನಿವಾಸಿ ಪ್ರಸಿದ್ಧ ನಾಟಿ ವೈದ್ಯರಾದ ವಾಸು ಪುಜಾರಿ ಕುಲಾವು ಅವರನ್ನು ಹಾಗೂ ಡಾ.ರಾಮಾರಾಯ ಪ್ರಭು, ದೋಟ ಕರ್ಪೆ ಹಾಗೂ ಆರಂಬೊಡಿ ಗ್ರಾಮದ ಮೋನಬ್ಬ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಪದಾಧಿಕಾರಿಗಳಾದ ಪ್ರಭಾಕರ ಪ್ರಭು ಸಿದ್ದಕಟ್ಟೆ, ಕಿರಣ್ ಮಂಜಿಲ, ಹರಿಪ್ರಸಾದ್ ಶೆಟ್ಟಿ, ರಾಜೇಶ್ ಕೊನೆರಬೆಟ್ಟು ಉಪಸ್ಥಿತರಿದ್ದರು,.ಕ್ಲಬ್ ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ನ್ಯಾಯವಾದಿ ಸುರೇಶ ಶೆಟ್ಟಿ ವಂದಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)