ಬಂಟ್ವಾಳ ತಾಲೂಕಿನ ರಾಯಿಯ ವಿವಿಧೆಡೆ ಬೂತ್ ಗಳ ಸಮಿತಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ನಡೆಯಿತು. ವಿವರಗಳಿಗೆ ಮುಂದೆ ಓದಿರಿ.
ರಾಯಿ ಬೂತ್ ಸಮಿತಿ 30ರ ವತಿಯಿಂದ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನದ ಪ್ರಯುಕ್ತ ಬೂತ್ ಸಮಿತಿ ಅಧ್ಯಕ್ಷರಾದ ಶ್ರೀ ಸಂತೋಷ್ ಗೌಡ ಗೋಳಿತಬೆಟ್ಟುಇವರ ಮನೆಯಲ್ಲಿ ರಾಷ್ಟಸೇವಿಕಾ ಸಮಿತಿಯ ಪ್ರಾಂತ ಸಂಪರ್ಕ ಪ್ರಮುಖರಾದ ಮೀನಾಕ್ಷಿ ಮಾತಾಜೀ ರಾಯಿ ಪುಷ್ಪಾರ್ಚನೆ ಮಾಡಿ ಬೌದ್ಧಿಕ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿಯಾದ ವಸಂತ ಕುಮಾರ್ ಅಣ್ಣಳಿಕೆ, ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಹಸಂಚಾಲಕರಾದ ಹರೀಶ್ ಆಚಾರ್ಯ ರಾಯಿ,ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ರಾಯಿ ಬೆಟ್ಟು,ಸಂತೋಷ್ ಗೌಡ ,ಪ್ರಮುಖರಾದ ಚಂದ್ರಶೇಖರ ಗೌಡ ಕಾರಂಬಡೆ ,ಪರಮೇಶ್ವರ ಪೂಜಾರಿ ರಾಯಿ,ಪವನ್ ಮಾಬೆಟ್ಟು,ಬೂತ್ ಸಮಿತಿ ಕಾರ್ಯದರ್ಶಿಯಾದ ನವೀನ್ ಕುಮಾರ್ ಸಾಲ್ಕೋಡಿ,ಹಾಗೂ ಪ್ರಮುಖ ಕಾರ್ಯಕರ್ತರು ಹಾಜರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)