ಮಂಗಳೂರು: ಇಂಟರ್ನೆಷನಲ್ ಐಕಾನಿಕ್ ಅವಾರ್ಡ್ಸ್ ಅವರು ಕೊಡಮಾಡುವ ಸೀಝನ್ 7 ನ ಬೆಸ್ಟ್ ಡೈರೆಕ್ಟ್ ಸೆಲ್ಲಿಂಗ್ ಎಂಟರ್ ಪ್ರಿನಾರ್ ಪ್ರಶಸ್ತಿ ಗೆ ಸಾಕ್ಷಾತ್ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ ಎಂದು ಸಾಕ್ಷಾತ್ ಶೆಟ್ಟಿ ಅವರ ತಮ್ಮ ರಕ್ಷಿತ್ ಶೆಟ್ಟಿ ಮಂಗಳೂರು ತಿಳಿಸಿದ್ದಾರೆ. ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ವಿವರಣೆ ನೀಡಿದರು. ಆಗಸ್ಟ್ 16 ರಂದು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಸಾಕ್ಷಾತ್ ಶೆಟ್ಟಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕದ ಮೊದಲಿಗರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.
ಸಾಕ್ಷಾತ್ ಶೆಟ್ಟಿ ಅವರು ಉತ್ಸಾಹಿ ಸಂಘಟಕರಾಗಿದ್ದು, ಯಶಸ್ವಿ ಯುವ ಉದ್ಯಮಿಯಾಗಿ ರಾಜ್ಯದ ಡೈರೆಕ್ಟ್ ಸೆಲ್ಲಿಂಗ್ ಕ್ಷೇತ್ರದಲ್ಲಿ ಮುಂಚೂಣಿಯ ನಾಯಕರಾಗಿ ಗಮನ ಸೆಳೆದಿದ್ದಾರೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು.
ಡೈರೆಕ್ಟ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಳೆದ 14 ವರ್ಷಗಳಿಂದ ತೊಡಗಿಸಿಕೊಂಡಿರುವ ಸಾಕ್ಷಾತ್ ಶೆಟ್ಟಿ ಅವರು ಅದೆಷ್ಟೋ ಯುವಜನತೆಯ ಬದುಕಿಗೆ ಸ್ಪೂರ್ತಿಯಾಗಿದ್ದಾರೆ.
ಇವರು ಪ್ರಸ್ತುತ ಡುಕ್ಸ್ ಎಂಜ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈ ಸಂಸ್ಥೆಯನ್ನು ದ.ಕ.ಜಿಲ್ಲೆಗೆ ಪರಿಚಯಿಸಿದ ಮೊದಲಿಗರೆಂಬ ಹೆಗ್ಗಳಿಕೆಯೂ ಇವರದ್ದು.
ಈ ಸಂಸ್ಥೆಯ ಮೂಲಕ ಈಗಾಗಲೇ ಜಿಲ್ಲೆ, ರಾಜ್ಯದ 10000ಕ್ಕೂ ಹೆಚ್ಚು ಯುವಜನತೆಗೆ ನೇರ ಮಾರುಕಟ್ಟೆ ಉದ್ಯಮದಲ್ಲಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ ಎಂದರು.ಮಂಗಳೂರಿನ ನಿವಾಸಿಗಳಾದ ಲೇ ಆನಂದ್ ಶೆಟ್ಟಿ ಮತ್ತು ಜಾನೇಶ್ವರಿ ಶೆಟ್ಟಿ ದಂಪತಿಯ ಪುತ್ರರಾದ ಸಾಕ್ಷಾತ್ ಶೆಟ್ಟಿ ಅವರು ಬಾಲ್ಯದಿಂದ ಬಡತನದಲ್ಲೇ ಬೆಳೆದರೂ ತನ್ನ ವಿಶೇಷವಾದ ಪರಿಶ್ರಮ, ಬದ್ಧತೆ, ಕರ್ತವ್ಯ ದಕ್ಷತೆ, ಸೇವಾ ನಿಷ್ಠತೆ, ನೇರ ನಡೆ ನುಡಿ, ಉತ್ತಮ ನಾಯಕತ್ವ, ಸಂಘಟನಾ ಚತುರತೆಯ ಮೂಲಕ ನೇರ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ.
ಛಾಲೆಂಜರ್ಸ್ ಫೌಂಡೇಶನ್ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಸೇವೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಸಾಕ್ಷಾತ್ ಶೆಟ್ಟಿ ಅವರು ಹಲವಾರು ಜನೋಪಯೋಗಿ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು. ನೇರ ಮಾರುಕಟ್ಟೆ ಉದ್ಯಮ ಕ್ಷೇತ್ರದ ಸಾಧನೆಗಾಗಿ ಪ್ರಥಮವಾಗಿ ಪ್ರಶಸ್ತಿ ನೀಡಲಾಗಿದ್ದು ಈ ಪ್ರಶಸ್ತಿ ನನಗೆ ಬಂದಿರುವುದು ಸಂತಸ ನೀಡಿದೆ. ನೇರ ಮಾರುಕಟ್ಟೆ ಉದ್ಯಮ ಕ್ಷೇತ್ರದ ಬಗೆಗಿರುವ ಖುಣಾತ್ಮಕ ಭಾವನೆಯು ಇದರಿಂದಾಗಿ ದೂರವಾಗಿದ್ದು ಯುವಸಮುದಾಯ ನೇರಮಾರುಕಟ್ಟೆ ಕ್ಷೇತ್ರದಲ್ಲಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದಂತಾಗಿದೆ ಎಂದು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಸಾಕ್ಷಾತ್ ಶೆಟ್ಟಿ ಮಂಗಳೂರು ಹೇಳಿದರು. ಚೆನ್ನೈತ್ತೋಡಿ ಗ್ರಾಮ ಪಂಚಾಯತು ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಪತ್ರಕರ್ತ ಗೋಪಾಲ ಅಂಚನ್, ಸಾಯಿಲ್ ಝಾಯಿರ್, ಮಮತಾ ಸಾಕ್ಷಾತ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.