ಬಂಟ್ವಾಳ: ಕಾರ್ಪೊರೆಟ್ ಕಂಪನಿಗಳು ಭಾರತ ಬಿಟ್ಟು ತೊಲಗಬೇಕು ಎಂದು ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ ರೈತ, ಕಾರ್ಮಿಕರಿಂದ ಪ್ರತಿಭಟನೆ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ನಡೆಯಿತು. ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ ಮತ್ತೆ ಕಾರ್ಪೋರೇಟ್ ಕಂಪೆನಿಗಳು ಭಾರತದಲ್ಲಿ ನೆಲೆಯೂರಿ ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದೆ ಎಂದು ಆರೋಪಿಸಿದರೆ, ಸಿಐಟಿಯು ಜಿಲ್ಲಾ ಕಾರ್‍ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ದುಡಿಯುವ ವರ್ಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಂಚಿಸುತ್ತಿವೆ, ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಮಾಲಕರ ಹಿತ ಕಾಯುತ್ತಿದೆ ಎಂದು ಆರೋಪಿಸಿದರು. ಮುಖಂಡರಾದ ಉದಯಕುಮಾರ್ ಬಂಟ್ವಾಳ , ವಿನಯನಡುಮೊಗರು, ಸೇವಂತಿ, ದೇಜಪ್ಪ ಪೂಜಾರಿ, ಲಿಯಾಕತ್ ಖಾನ್ , ಅಪ್ಪು ನಾಯ್ಕ ನಾರಾಯಣ ಕೊಲೋಡಿ, ಈಶ್ವರ , ದಾಮೋದರ ಪರಕಜೆ ಮೊದಲಾದವರಿದ್ದರು.