ಬಂಟ್ವಾಳ

ಬಂಟ್ವಾಳದ ಸೇವಾಭಾರತಿಯಿಂದ ನಿರಂತರ 70 ದಿನಗಳ ಸೇವಾ ಕಾರ್ಯ ಅವಲೋಕನ

ಜಾಹೀರಾತು

ಬಂಟ್ವಾಳ ಸೇವಾ ಭಾರತಿಯ ತಂಡ ನಿರಂತರವಾಗಿ 70 ದಿನಗಳಿಂದ ಕೊರೊನಾ ಸಂಕಷ್ಟದ ಸಮಯದಲ್ಲಿ ದಿನದ 24 ತಾಸು ಕೊರೊನಾ ಸೋಂಕಿತರಷ್ಟೇ ಅಲ್ಲ, ಇತರ ರೋಗಿಗಳಿಗೂ ಆಂಬುಲೆನ್ಸ್ ಜೊತೆಗೆ ಸಹಾಯ ನೀಡುವ ಕಾರ್ಯವನ್ನು ನಡೆಸುತ್ತಿದ್ದು, ಇದರ ಅವಲೋಕನ ಕಾರ್ಯವನ್ನು ಬಂಟ್ವಾಳದ ಬಿ.ಸಿ.ರೋಡಿನಲ್ಲಿರುವ ಕುಲಾಲ ಭವನದಲ್ಲಿ ಸೋಮವಾರ ಸಂಜೆ ಮಾಡಲಾಯಿತು.

ಈ ಸಂದರ್ಭ ಕೋವಿಡ್ ವಾರಿಯರ್ ಗಳಾದ ವೈದ್ಯರನ್ನು ಗೌರವಿಸಲಾಯಿತು.70 ದಿನಗಳ ಕಾಲ ನಿರಂತರವಾಗಿ ದುಡಿದ ಸೇವಾ ಭಾರತಿಯ ಎಲ್ಲಾ ಕಾರ್ಯಕರ್ತರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ  ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ನ್ನು ಮುಕ್ತಿಗೊಳಿಸುವ ಈ ಹೋರಾಟದಲ್ಲಿ  ಸೇವಾ ಭಾರತಿಯ ಕಾರ್ಯಕರ್ತರು ತಮ್ಮ ಮನೆ,ಕುಟುಂಬದ ಬಗ್ಗೆಯ ಚಿಂತಿಸದೆ ಸಮಾಜ ಗುರುತಿಸುವ ರೀತಿ ಅಭೂತಪೂರ್ವವಾಗಿ ಮಾಡಿರುವ ಸೇವೆ ಮರೆಯಲಾಗದ ಕ್ಷಣವಾಗಿದೆ ಎಂದರು.

ಜಾಹೀರಾತು

ಬಂಟ್ವಾಳ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ ಸೇವಾ ಭಾರತಿ ಕಾರ್ಯವನ್ನು ಶ್ಲಾಘಿಸಿದರು. ನಗರ ಸಂಚಾರಿ ವೈದ್ಯಕೀಯ ಘಟಕದ ವೈದ್ಯೆ ಡಾ.ಅಶ್ವಿನಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬಂಟ್ವಾಳ ಮಂಡಲ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಶೇಖರ ಶೆಟ್ಟಿ ಅಮ್ಟಾಡಿ ಅವರು ಸೇವಾ ಭಾರತಿ ಸೇವೆಯನ್ನು ಅಭಿನಂದಿಸಿದರು. ಹಿರಿಯ ಆರೆಸ್ಸೆಸ್ ಮುಖಂಡ ಅಜೇಯ ಕೊಂಬ್ರಬೈಲ್ ಶುಭ ಹಾರೈಸಿದರು.

ಹಿಂಜಾವೇ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ವರದಿ ವಾಚಿಸಿ, ಸೇವಾಭಾರತಿಯ ಚಟುವಟಿಕೆಗಳಿಗೆ ಆರೋಗ್ಯ, ಪೊಲೀಸ್, ತಾಲೂಕು ಕಚೇರಿ ಮತ್ತು ಕೋವಿಡ್ ಗೆ ಸಂಬಂಧಿಸಿದ ಎಲ್ಲ ಸರ್ಕಾರಿ ಇಲಾಖೆಗಳು ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ವಿವಿಧ ಸಂಘಟನೆಗಳ ಪ್ರಮುಖರಾದ ಜಿ.ಕೆ.ಭಟ್ , ಮಾಧವ್, ಸುರೇಶ್ ಬೆಂಜನಪದವು, ಭರತ್ ಕುಮ್ಡೇಲು, ರಾಜೇಶ್ ಬೊಳ್ಳುಕಲ್ಲು, ಪ್ರಶಾಂತ್ ಕೆಂಪುಗುಡ್ಡೆ,  ಚಂದ್ರ ಕಲಾಯಿ, ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಸೇವಾಭಾರತಿ ಚಟುವಟಿಕೆ ಕುರಿತು ವಿಭಾಗ ಸಹಕಾರ್ಯವಾಹ ಜಗದೀಶ್ ಮಾತನಾಡಿದರು. ಕಳ್ಳಿಗೆ ಗ್ರಾಪಂ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ