ಫರಂಗಿಪೇಟೆ

ಸೇವಾಭಾರತಿ, ಹಿಂದು ಜಾಗರಣಾ ವೇದಿಕೆ ಆಶ್ರಯದಲ್ಲಿ ತುಂಬೆಯಲ್ಲಿ ರಕ್ತದಾನ ಶಿಬಿರ

ಬಂಟ್ವಾಳ: ಬಂಟ್ವಾಳ ತಾಲೂಕು ಸೇವಾಭಾರತಿ, ತುಂಬೆ ವಲಯ ಹಿಂದು ಜಾಗರಣಾ ವೇದಿಕೆ ಆಶ್ರಯದಲ್ಲಿ ಭಾನುವಾರ ತುಂಬೆ ಶ್ರೀರಾಮನಗರ ಶ್ರೀಶಾರದಾ ಸಭಾಭವನದಲ್ಲಿ ರಕ್ತದಾನದ 35ನೇ ಶಿಬಿರ ಆರೆಸ್ಸಸ್ ಹಿರಿಯ ಮಾರ್ಗದರ್ಶಕ ದಿ.ವೆಂಕಟರಮಣ ಹೊಳ್ಳ ಸ್ಮರಣಾರ್ಥ ವೆನ್ಲಾಕ್, ಕೆಎಂಸಿ ಸಹಯೋಗದಲ್ಲಿ ನಡೆಯಿತು.

ಈ ಸಂದರ್ಭ ವೆಂಕಟರಮಣ ಹೊಳ್ಳ ಅವರ ಕುರಿತು ಮಾತನಾಡಿದ ಆರೆಸ್ಸೆಸ್ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಣ್, ಜೀವನದುದ್ದಕ್ಕೂ ಬರೀಗಾಲಲ್ಲೇ ಸಂಚರಿಸಿ ಸಂಘ ಸೇವೆಯನ್ನು ಭಗವಂತನ ಸೇವೆ ಎಂಬಂತೆ ನಿಷ್ಠೆಯಿಂದ ಕೈಗೊಂಡು ಇಡೀ ಹಿಂದೂ ಸಮಾಜಕ್ಕೆ ಆದರ್ಶವಾದವರು ದಿ.ಹೊಳ್ಳರು. ತನ್ನ ಉಸಿರಿರುವ ಕೊನೆ ಘಳಿಗೆಯಲ್ಲೂ ಇಳಿವಯಸ್ಸಿನಲ್ಲೂ ರಕ್ತದಾನದ ಸೇವೆಯನ್ನು ಸಮರ್ಪಿಸಿ ರಾಷ್ಟ್ರಸೇವೆಯ ವೃತವನ್ನಾಚರಿಸಿದ್ದರು ಎಂದರು. ವೈದ್ಯ ಡಾ. ರಘುರಾಮ ಶೆಟ್ಟಿ ಗುಳ್ಳಾಡಿ ಮತ್ತು ಯುವಶಕ್ತಿ ರಕ್ತನಿಧಿ ತಂಡವನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಉದ್ಯಮಿಗಳಾದ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಕಿಶೋರ್ ಕುಮಾರ್, ಹಿಂ.ಜಾ.ವೇ ಜಿಲ್ಲಾಧ್ಯಕ್ಷರಾದ ಜಗದೀಶ್ ಹೊಳ್ಳರಬೈಲ್, ಹಿಂ.ಜಾ.ವೇ ತಾಲೂಕು ಅಧ್ಯಕ್ಷ ತಿರುಲೇಶ್ ಬಡಗಬೆಳ್ಳೂರು ಮತ್ತು ಹಿಂ.ಜಾ.ವೇ ತುಂಬೆ ವಲಯ ಅಧ್ಯಕ್ಷ ವಿಜಯ್ ಕುಮಾರ್ ಕಜೆಕಂಡ,  ಕಾರ್ಯಕ್ರಮದಲ್ಲಿ ಕೊಡ್ಮಣ್ ಕಾಂತಪ್ಪ ಶೆಟ್ಟಿ, ತೇವು ತಾರಾನಾಥ ಕೊಟ್ಟಾರಿ, ಗಣೇಶ್ ಸುವರ್ಣ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮಾಧವ ನಾಣ್ಯ, ಪ್ರವೀಣ್ ಬಿ ತುಂಬೆ, ಸುರೇಶ್ ನಾಯ್ಕ, ದಾಮೋದರ ನೆತ್ತರಕೆರೆ, ಮನೋಹರ ಕುಂಜತ್ತೂರು, ಪ್ರಶಾಂತ್ ಕೆಂಪು ಗುಡ್ಡೆ, ಸುಧಾಕರ ರಾಮಲ್ ಕಟ್ಟೆ, ಸಿದ್ದಪ್ಪ ಅಂಗಡಿ, ರಾಘವ ಬಂಗೇರ ಪೇರ್ಲಬೈಲ್, ಪುರುಷೋತ್ತಮ ಗಟ್ಟಿ, ಯೋಗೀಶ್ ಕೋಟ್ಯಾನ್, ಯಶವಂತ ಬೊಳ್ಳಾರಿ, ಕಿಶೋರ್ ರಾಮಲ್ ಕಟ್ಟೆ, ಅರುಣ್ ಗಾಣದಲಚ್ಚಿಲ್ ಸೇರಿದಂತೆ ಸಂಘದ ಹಲವು ಪ್ರಮುಖರು, ಕಾರ್ಯಕರ್ತರು, ಕೆಎಂಸಿ ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು. ನಾಲ್ವರು ಮಹಿಳೆಯರು ಸೇರಿದಂತೆ 110 ಮಂದಿ ಸ್ವಯಂಸೇವಕರು ರಕ್ತದಾನ ಮಾಡಿದರು. ಸುಶಾನ್ ಆಚಾರ್ಯ ಸ್ವಾಗತಿಸಿದರು. ಜಗದೀಶ್ ಕಡೆಗೋಳಿ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ