ವೈವಿಧ್ಯ

ತಾಲೂಕು ಆಫೀಸ್ ನಲ್ಲಿ RTC ಪಡೆಯಲು ಸಾಲು ನಿಲ್ಲುವ ಮೊದಲು ಇದನ್ನು ಓದಿ..

ಬರೆದವರು: ನಿತೇಶ ಕೆ.

ಸಾಮಾನ್ಯವಾಗಿ ಜಾಗ ಮಾರಾಟ ಮಾಡಲು ಹೊರಟಾಗ ಅಥವಾ ಯಾವುದಾದರೂ ಸರ್ಕಾರಿ ಯೋಜನೆಗೆ ಅರ್ಜಿ ಹಾಕುವಾಗ RTCಯನ್ನು ಕೇಳುತ್ತಾರೆ. ಹಳ್ಳಿಯ ಜನ ಹತ್ತಾರು ಕಿಲೋಮೀಟರ್ ದೂರ ತಾಲೂಕು ಕಚೇರಿಗೆ ಬಂದು ನಾಡ ಕಚೇರಿ ಮುಂದೆ ಸಾಲು ನಿಲ್ಲುವುದು ಸಾಮಾನ್ಯ. ಕೆಲವೊಮ್ಮೆ ಅವರಿಗೆ ಸರ್ವೇ ನಂಬರ್ ಆಗಲಿ ಅಥವಾ ಹಿಸ್ಸಾ ನಂಬರ್ ಗೊತ್ತೇ ಇರಲ್ಲ. ಸಾಲು ನಿಂತು ಪರದಾಡುವ ಬದಲು ನಿಮ್ಮ ಮೊಬೈಲ್ ನಲ್ಲೇ ನಿಮ್ಮ RTC ಕನ್ಫರ್ಮ್ ಮಾಡ್ಕೊಳ್ಳಿ.. ಹಾಗೆಯೇ ಜಾಗ ಖರೀದಿ ಮಾಡುವವರೂ ಅಷ್ಟೇ. ಅದೆಲ್ಲೋ ಹೋಗಿ ಸರ್ಕಾರಿ ಜಾಗಕ್ಕೆ ದುಡ್ಡು ಕೊಟ್ಟು ಮೋಸ ಹೋಗುವ ಮೊದಲು ಈ ಮಾಹಿತಿ ನೋಡಿ..

ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತ್ತು ಭೂ ದಾಖಲೆಗಳ ಇಲಾಖೆ DISHANK ಎಂಬ ಅಪ್ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ ಮತ್ತು ಐ ಓಸ್ ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಇನ್‌ಸ್ಟಾಲ್ ಮಾಡಿ ಓಪನ್ ಮಾಡಿದಾಗ ನಿಮ್ಮ GPS ಆನ್ ಮಾಡಿ. ಹಾಗೆ ಲೋಕೇಶನ್ ಸೆಟ್ಟಿಂಗ್ಸ್ ಕೇಳಿದರೆ ಅದಕ್ಕೂ ಅನುಮತಿ ಕೊಡಿ. ನಿಮ್ಮ ಲೋಕೇಶನ್ ಆನ್ ಆಗಿದ್ದರೆ ನೀವು ನಿಂತಿರುವ ಜಾಗದ ಸರ್ವೇ ನಂಬರ್ ಮತ್ತು ಅದರ ಬಾರ್ಡರ್ ಅನ್ನು ನೀವು ಗುರುತಿಸಬಹುದು. ಬಲ ಭಾಗದ ಮಧ್ಯದಲ್ಲಿ ಮೊದಲ ಮೆನೂ ಆಯ್ಕೆ ಮಾಡಿದರೆ ಮಾಪ್ಸ್ ಆಪ್ಶನ್ ಸಿಗುತ್ತದೆ. ಅದರಲ್ಲಿ ESRI satellite map ಆಯ್ಕೆ ಮಾಡಿದರೆ ನೀವು ಗೂಗಲ್ ಮ್ಯಾಪ್ ಸರಿಯಾಗಿ ನೋಡಬಹುದು. ಹಾಗೆಯೇ ನಿಮಗೆ ಸರ್ವೇ ಕಲ್ಲಿನ ಬಗ್ಗೆ ಅನುಮಾನ ಇದ್ದರೆ ನೀವು ಅದನ್ನೂ ಗುರುತು ಹಿಡಿಯಬಹುದು. ನೀವು ಮೂವ್ ಆದ ಹಾಗೆ gps ಮಾರ್ಕರ್ ಬದಲಾಗಿ ನಿಮ್ಮ ಸರ್ವೇ ನಂಬರ್ ಬಾರ್ಡರ್ ಕಂಡು ಹಿಡಿಯಬಹುದು.
ಜೊತೆಗೆ ನಿಮ್ಮ ಪಕ್ಕದ ಜಮೀನಿನ ಸರ್ವೇ ನಂಬರ್ ಕೂಡ ಸುಲಭವಾಗಿ ಕಂಡು ಹಿಡಿಯಬಹುದು.

ಜಾಹೀರಾತು

ಹಾಗೆಯೇ ನಿಮ್ಮ ಕೆಳ ಭಾಗದಲ್ಲಿ ಎಡಕ್ಕೆ measurement tools ಆಯ್ಕೆ ಒತ್ತಿ ನಿಮ್ಮ ಜಾಗವನ್ನು ಗುರುತು ಮಾಡಿದರೆ ನಿಮ್ಮ ಜಾಗದ ಅಂದಾಜು ವಿಸ್ತೀರ್ಣ ವನ್ನು ಕಂಡು ಹಿಡಿಯಬಹುದು. ಗೂಗಲ್ ಮ್ಯಾಪ್ ಜ಼ೂಮ್ ಅಷ್ಟೊಂದು ಚೆನ್ನಾಗಿಲ್ಲದ ಕಾರಣ ಅಳತೆ ಅಷ್ಟು ನಿಖರತೆ ಇರುವುದಿಲ್ಲ ಹಾಗೂ ಇಲ್ಲಿ ಸೆಂಟ್ಸ್ ಎಕರೆ ಅಳತೆ ಕೊಟ್ಟಿಲ್ಲ. ನಿಮಗೆ ಸ್ಕ್ವೇರ್ ಮೀಟರ್ ಅಥವಾ ಸ್ಕ್ವೇರ್ ಫೀಟ್ ಅಳತೆಯನ್ನು ನೀವು ಗೂಗಲ್ ಪೇಜ್ ನಲ್ಲಿ ಸೆಂಟ್ಸ್ ಅಥವಾ ಎಕರೆಗೆ ವರ್ಗಾಯಿಸಬಹುದು.

ನಿಮ್ಮ ಹಿಸ್ಸಾ ನಂಬರ್ ಪಡೆಯುವುದು ಹೇಗೆ? ಕೆಳ ಭಾಗದಲ್ಲಿ ಎಡ ಮೂಲೆಗೆ search sy No. ಅನ್ನೋ ಮೆನೂ ಆಯ್ಕೆ ಮಾಡಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಮತ್ತು ಕೊನೆಗೆ ಸರ್ವೇ ನಂಬರ್ ಎಂಟರ್ ಮಾಡಿದರೆ ಹಿಸ್ಸಾ ಮೆನೂ ಲಿಸ್ಟ್ ಬರುತ್ತದೆ. ಈಗ ಒಂದೊಂದಾಗಿ ಅಲ್ಲಿರುವ ಓನರ್ ಹೆಸರನ್ನು ಪರೀಶೀಲಿಸಿ ನೋಡಿದರೆ ನಿಮ್ಮ ದಾಖಲೆ ಸಿಗುತ್ತದೆ. ಸಿಕ್ಕಿರುವ ಮಾಹಿತಿ ಯನ್ನು ಭೂಮಿ ವೆಬ್‌ಸೈಟ್ ನಲ್ಲಿ ಸರ್ಚ್ ಮಾಡಿದರೆ ನಿಮ್ಮ RTC ಕಾಪೀ ಉಚಿತ ವಾಗಿ ಪಡೆಯಬಹುದು. ದಿನಕ್ಕೆ ನೂರಾರು ಜನರು ಸರಿಯಾದ ಮಾಹಿತಿ ಇಲ್ಲದೆ ತಾಲೂಕು ಕಚೇರಿಗೆ ಅಡ್ಡಾಡುತ್ತಾರೆ. ನಿಮ್ಮ ಮನೆ ಪಕ್ಕ ಅಂಥವರು ಯಾರಾದರೂ ಇದ್ದರೆ ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಅವರಿಗೆ DISHANK ಅಪ್ ಬಳಸಿ ಅವರಿಗೆ ಸಹಾಯ ಮಾಡಿ ಹಾಗೂ ಯಾರಾದರೂ ಜಾಗ ಕೊಳ್ಳುವವರು ಇದ್ದರೆ ಅವರಿಗೂ ಈ app ಸಹಾಯಕ್ಕೆ ಬರುತ್ತದೆ. ಒಂದ್ಸಲ ಅಪ್ ಇನ್‌ಸ್ಟಾಲ್ ಮಾಡಿ ನಿಮ್ಮ ಮನೆ ಇರುವ ಜಾಗ ಹಾಗೂ RTC ದಾಖಲೆ ಸರಿಯಾಗಿದೆಯೇ ಪರೀಕ್ಷಿಸಿ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts