ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ರಸ್ತೆ ಕಾಮಗಾರಿ 2 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದ್ದು, ಇದರ ಪ್ರಗತಿಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶನಿವಾರ ವೀಕ್ಷಿಸಿದರು. ರೂ 2 ಕೋಟಿ ವೆಚ್ಚದಲ್ಲಿ ಬಿ.ಸಿ ರೋಡ್ ನಗರ ಸುಂದರೀಕರಣ ಯೋಜನೆಯಡಿ ಕೈಕುಂಜೆಗೆ ತೆರಳುವ ರಸ್ತೆಯ ಆರಂಭಿಕ 190 ಮೀಟರ್ ಭಾಗದ ಕಾಂಕ್ರೀಟೀಕರಣ ನಡೆಯುತ್ತಿದ್ದು ಎರಡೂ ಬದಿಯಲ್ಲಿ ಅಗಲವಾದ ರಸ್ತೆ ಮಧ್ಯೆ ಡಿವೈಡರ್ ಸಹಿತ ಚರಂಡಿ ಅಭಿವೃದ್ಧಿ ಮೊದಲಾದ ಕೆಲಸ ಕಾರ್ಯಗಳು ನಡೆಯುತ್ತಿವೆ. ಈಗಾಗಲೇ ಕಾಮಗಾರಿಯ ಭಾಗವಾಗಿ ಹಳೇ ಶಿಥಿಲವಾಗಿದ್ದ ರಂಗಮಂದಿರವನ್ನು ಕೆಡಹಲಾಗಿದೆ. ಇದೀಗ ಚರಂಡಿ ಕಾರ್ಯ ನಡೆಯುತ್ತಿದೆ. ಇವೆಲ್ಲವನ್ನೂ ಶಾಸಕ ರಾಜೇಶ್ ನಾಯ್ಕ್ಅವರು ಪರಿಶೀಲಿಸಿದರು. ಈ ಸಂದರ್ಭ ಸುದರ್ಶನ ಬಜ ಉಪಸ್ಥಿತರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…