ನಿತೇಶ ಕೆ.
ಆರು ತಿಂಗಳ ಕೆಳಗೆ ಗ್ರಾಮ ಪಂಚಾಯತ್ ವೋಟ್ ಮುಗಿದಿದೆ. ಯಾವ ಚುನಾವಣೆಗೂ ನಡೆಯದ ರಾಜಕೀಯ ಕುತೂಹಲ- ಹೋರಾಟ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಡೆದು ಹೋಯಿತು. ನಮ್ಮ ನೆಚ್ಚಿನ ಸದಸ್ಯರನ್ನು ಆರಿಸಿ ಕಳಿಸಿದ್ದೇವೆ. ಮುಂದೆ ಐದು ವರ್ಷ ಅವರದ್ದೇ ಕಾರುಬಾರು ಅಂತ ಸುಮ್ಮನೆ ಕುಳಿತುಕೊಳ್ಳುವ ಅಗತ್ಯ ಇಲ್ಲ. ನಿಮ್ಮ ಮನವಿ, ದೂರು, ಯೋಜನೆಗಳು, ಪಂಚಾಯತ್ ಬಜೆಟ್, ಎಷ್ಟು ಕೋಟಿ ಅನುದಾನ ಬಂದಿದೆ? ಅಧಿಕಾರಿಗಳ ನಂಬರ್, ಸದಸ್ಯರ ನಂಬರ್ ಹೀಗೆ ಎಲ್ಲವೂ ಸುಲಭವಾಗಿ ನಿಮ್ಮ ಅಂಗೈಯಲ್ಲಿ ಸಿಗುತ್ತದೆ. ವಿವರಗಳಿಗೆ ಮುಂದೆ ಓದಿರಿ.
ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂಚಮಿತ್ರ ತಾಣದಲ್ಲಿ ಸಂಪೂರ್ಣ ವಿವರವನ್ನು ಸಾರ್ವಜನಿಕರು ನೋಡಬಹುದು. ನಿಮ್ಮ ಪಂಚಾಯತ್ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಕ್ರಮವನ್ನು ಅನುಸರಿಸಿ..
ನಿಮ್ಮ ಬ್ರೌಸರ್ ಓಪನ್ ಮಾಡಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.. http://panchamitra.kar.nic.in/ ಭಾಷೆ ಕನ್ನಡ ಅಥವಾ ಇಂಗ್ಲೀಷ್ ಹಾಗೂ ಇಂಡಿವಿಜುವಲ್ ಅಥವಾ ಸಮ್ಮರೀ ಆಯ್ಕೆ ಗಳಿರುತ್ತವೆ. ಇಂಡಿವಿಜುವಲ್ ಹಾಗೂ ಕನ್ನಡ ಆಯ್ಕೆ ಸೂಕ್ತವಾಗಿರುತ್ತದೆ. ಎಡಬಾಗದಲ್ಲಿ ಕರ್ನಾಟಕ ಮ್ಯಾಪ್ ಮೇಲೆ ಜ಼ೂಮ್ ಮಾಡಿ ನಿಮ್ಮ ಜಿಲ್ಲೆ ಯನ್ನು ಟಚ್ ಮಾಡಿ. ಆ ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿದಾಗ ನಿಮ್ಮ ಬಲ ಭಾಗದಲ್ಲಿ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿ. ನಿಮಗೆ ಗ್ರಾಮದ ಬಗ್ಗೆ ಒಂದು ಸಂಕ್ಷಿಪ್ತ ಟಿಪ್ಪಣಿ ಸಿಗುತ್ತದೆ. ಅದರ ಮೇಲೆ ಮೆನು ಆಯ್ಕೆಗಳಿರುತ್ತವೆ.
ಈ ಪುಟದಲ್ಲಿ ನೀವು ಸದಸ್ಯರ ಬಗ್ಗೆ ಮಾಹಿತಿ, ಸಾಮಾನ್ಯ ಮಾಹಿತಿ, ಪಂಚಾಯತಿಯ ಆಸ್ತಿ ವಿವರಗಳು, ನರೇಗಾ ಯೋಜನೆಯ ಮಾಹಿತಿಗಳು, ಫಲಾನುಭವಿಗಳ ಪಟ್ಟಿಗಳು, ನಿಮ್ಮ ಅರ್ಜ್ ಅಥವಾ ದೂರಿನ ಸ್ಥಿತಿ, ಪ್ರಗತಿ ಕಾಮಗಾರಿಗಳು , ಪಂಚಾಯತ್ ಕೆಲಸಗಾರರ ವಿವರಗಳು, ಪಂಚಾಯಿತಿಯ ಬಜೆಟ್ ಮಾಹಿತಿ, ಆಯಾವ್ಯಯ ಪಟ್ಟಿ, ಟೆಂಡರ್ ಗಳ ಮಾಹಿತಿ ಹೀಗೆ ಹತ್ತು ಹಲವು ಮಾಹಿತಿಗಳು ನಿಮ್ಮ ಅಂಗೈಯಲ್ಲಿ ಪಡೆಯಬಹುದು. ನೀವೇನಾದರೂ ಮನವಿ ಕೊಟ್ಟಾಗ ಪಂಚಾಯತ್ ನಲ್ಲಿ ದುಡ್ಡಿಲ್ಲ ಅಂತ ಸಬೂಬು ಕೇಳಿದವರು ಆಯಾವ್ಯಯ ಪಟ್ಟಿ ನೋಡಿ ಶಾಕ್ ಆಗಬೇಡಿ. ಕೆಲವೊಂದು ಮಾಹಿತಿಗಳು ಅಪ್ಲೋಡ್ ಆಗದಿದ್ದಲ್ಲಿ ಅಧಿಕಾರಿಗಳ ನಂಬರ್ ಅಲ್ಲೇ ಇವೆ. ಹಾಗೆಯೇ ಕಾಲ್ ಮಾಡಿ ಸರಿಯಾದ ಮಾಹಿತಿ ಅಪ್‌ಲೋಡ್ ಮಾಡಲು ಕೇಳೋಕೆ ಮರೀಬೇಡಿ..
ಇನ್ನಷ್ಟು ಲೇಖನಗಳು ವರದಿಗಳಿಗೆ www.bantwalnews.com ಓದಿರಿ.