ಪ್ರಮುಖ ಸುದ್ದಿಗಳು

ಸೇವ್ ಲೈಫ್  ಟ್ರಸ್ಟ್ ವತಿಯಿಂದ 6 ಆಕ್ಸಿಜನ್  ಕಾನ್ಸನ್ಟ್ರೇಟರ್ಸ್ ವೆನಲಾಕ್ ಆಸ್ಪತ್ರೆಗೆ ಹಸ್ತಾಂತರ

ಮಂಗಳೂರು : ನಗರದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಓಕ್ಸಿಜೆನ್  ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮುಖಾಂತರ ಇಂದು ಹಸ್ತಾಂತರಿಸಲಾಯಿತು . ಕಳೆದ ಹಲವಾರು ವರ್ಷಗಳಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯಲ್ಲಿ  ಆರ್ಥಿಕವಾಗಿ ಹಿಂದುಳಿದ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾದ ಜನರಿಗೆ ಸಾಮಾಜಿಕ ಜಾಲತಾಣದ ಮುಖಾಂತರ ಹಣ ಸಂಗ್ರಹಿಸಿ ವೈದ್ಯಕೀಯ ವೆಚ್ಚ ಭರಿಸುತಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ . ಕಳೆದ 10 ತಿಂಗಳಿನಲ್ಲಿ 200 ಕ್ಕೂ ಅಧಿಕ ಬೇರೆ ಬೇರೆ ಕಾರಣಗಳಿಗೆ 1.1 ಕೋಟಿಗೂ ಅಧಿಕ ಮೊತ್ತ ಸಹಾಯ ಹಸ್ತ ಚಾಚಿದ್ದು , ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ . ಈ ಬಾರಿ  ಮಂಗಳೂರು , ಬಂಟ್ವಾಳ , ಉಡುಪಿಯ 700 ಕುಟುಂಭಗಳಿಗೆ ಅಗತ್ಯ ವಸ್ತುಗಳ ಕಿಟ್  ಗಳನ್ನು ವಿತರಿಸಲಾಗಿದೆ ,   ಮಹಾಮಾರಿಯ ಎರಡನೇ ಅಲೆಯು ವಿಪರೀತವಾಗಿ ಹರಡುತ್ತಿದ್ದು , ರಾಜ್ಯಾ ದ್ಯಂತ ಕೈ ಮೀರಿಹೋಗಿರುತ್ತದೆ , ಈ ಪರಿಸ್ಥಿತಿಯನ್ನು ಮನಗಂಡು  ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಓಕ್ಸಿಜೆನ್  ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ನೀಡಲಾಗಿದೆ . ಈ ಓಕ್ಸಿಜೆನ್  ಕಾನ್ಸನ್ಟ್ರೇಟರ್ಸ್ ಗಳನ್ನು ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿಗಳು ಮಾತನಾಡಿ ನೀವು ತಮ್ಮ ಸಂಸ್ಥೆಯ ವತಿಯಿಂದ ಸಾರ್ವಜಿಕರಿಗೆ ಉಪಯೋಗವಾಗುವಂತಹ ಸೇವಾ ಕಾರ್ಯ ಮೆಚ್ಚು ವಂಥದದ್ದು , ನೀವು ನೀಡಿದ ರೀತಿಯಂತೆ ಇನ್ನು ಸಾರ್ವಜನಿಕ ಸೇವಾ ಸಂಸ್ಥೆಗಳು ಮುಂದೆ ಬರುವಂತೆ ಆಗಲಿ ಎಂದು ಶುಭ ಹರಿಸಿದರು , ಬಳಿಕ 6 ಓಕ್ಸಿಜೆನ್  ಕಾನ್ಸನ್ಟ್ರೇಟರ್ಸ್ ಗಳನ್ನು ಡಿ ಎಂ ಓ ರವರಿಗೆ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ , ಛಾಯಾಗ್ರಾಹಕ ಮಂಜು ನೀರೇಶ್ವಾಲ್ಯ , ರಮೇಶ್ ಶೆಣೈ ಉಪಸ್ಥಿತರಿದ್ದರು . For more news Click www.bantwalnews.com

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts