ಸಿನಿಮಾ

ಥಂಡಿ ಮಳೆ, ಲಾಕ್ ಡೌನ್… ಆನ್ ಲೈನ್ ನಲ್ಲಿ ಸಿನಿಮಾ ನೋಡ್ತೀರಾ? ಇಲ್ಲಿದೆ ರಿವ್ಯೂ

ಜೋರಾಗಿ ಮಳೆ ಬರುತ್ತಿರುವ ಹೊತ್ತಿನಲ್ಲಿ ಎಲ್ಲರ ಚಿತ್ತ ಆನ್ಲೈನ್ ನಲ್ಲಿ ದೊರಕುವ ಸಿನಿಮಾಗಳತ್ತ ಇರುತ್ತದೆ. ಸ್ವಲ್ಪ ಭಿನ್ನವಾದ ಸಿನಿಮಾ ನೋಡಬೇಕು ಹಾಗೂ ನೆಟ್ ಫ್ಲಿಕ್ಸ್ ನಿಮ್ಮಲ್ಲಿದೆ ಎಂದಾದರೆ ವಿಮರ್ಶಕ ಪ್ರಶಾಂತ್ ಭಟ್  ಕೆಲ ಸಿನಿಮಾಗಳ ಕುರಿತು ಬರೆದಿದ್ದಾರೆ.

Muramba (marati, Netflix) ಇಬ್ಬರು ಚಂದದ ಚಿಗರೆಯಂತಹ ಯೌವ್ವನದ ಪ್ರಣಯಿಗಳು, ಅವನ ಮನೆಯಲ್ಲಿ ಅಪ್ಪ‌ ಅಮ್ಮ‌ ಇಬ್ಬರೂ ದೋಸ್ತುಗಳ‌‌ ಹಾಗೆ. ಅವಳ ಮನೆಯಲ್ಲು ಹಾಗೆ.. ಅವಳು ಸ್ವತಂತ್ರ ‌ಮನೋಭಾವದ ಹುಡುಗಿ ,ಅವ ಗೋಲ್ಡ್ ಮೆಡಲಿಸ್ಟ್ ಅದರೂ ನೆಲೆ ನಿಲ್ಲದ‌ ಹುಡುಗ.

ಕತೆ ಶುರುವಾದಾಗಲೇ ಅವರಿಗೆ ಬ್ರೇಕ್ ಅಪ್ ಆಗಿದೆ. ಸಣ್ಣ ಸಣ್ಣ ಫ್ಲಾಶ್ ಬ್ಯಾಕ್‌ಗಳಲ್ಲಿ ಅವರ ಸಂಬಂಧ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅವನ‌ ಅಪ್ಪ ಅಮ್ಮ ‌ಆ ಹುಡುಗಿಯ ಜೊತೆ ಅವನ ಬ್ರೇಕಪ್‌ಗೆ ಕಾರಣವೇನು? ಅವರು ಮತ್ತೆ ಸೇರಬಹುದೇ?ಎಂದೆಲ್ಲ ಯತ್ನ ಮಾಡುತ್ತಾರೆ..ಜಾಸ್ತಿ ರಗಳೆಯಿಲ್ಲದ ,ಮನಸಿಗೆ ಹಾಯೆನಿಸುವ ಸಿನಿಮಾ..ಚಂದ ಚಂದ.ಕ್ಯೂಟ್ ಕ್ಯೂಟ್ ಬದುಕಿನ ಸ್ವಾದದ ಕುರಿತಾದ ಸಿನಿಮಾಗಳಿಗೆ ಮರಾಠಿ, ಥ್ರಿಲ್ಲರ್ ಹಾರರ್‌ಗೆ ಬೆಂಗಾಲಿ, ವಾಸ್ತವಕ್ಕೆ ಮಲಯಾಳಂ ,ವಾಸ್ತವದ ವೈಭವೀಕರಣಕ್ಕೆ ತಮಿಳು , ಎಲ್ಲದನ್ನೂ ದೊಡ್ಡದಾಗಿ ತೋರಿಸಲು ತೆಲುಗು,‌ಮನುಷ್ಯರು ನೋಡಲು ಅಸಾಧ್ಯವಾದುದಕ್ಕೆಲ್ಲ ಹಿಂದಿ, ಎಲ್ಲದರ ನಡುವೆ ಒದ್ದಾಡಲು ಕನ್ನಡ ನೋಡಬಹುದು.ವಿರಾಮದ ಸಮಯದಲ್ಲಿ ‌ನೋಡಿ.ಹಗುರಾಗಿ. ರೇಟಿಂಗ್ 3.5/5

ಜಾಹೀರಾತು

Mandela (tamil,Netflix) ಹಳ್ಳಿಯ ಜಾತಿ ರಾಜಕೀಯ, ವೋಟು ರಾಜಕೀಯದಲ್ಲಿ ಎಲ್ಲರಿಂದ ತುಳಿತಕ್ಕೊಳಗಾದ ಒಬ್ಬ ಕ್ಷೌರಿಕ ಬಡಪಾಯಿಗೆ ಹೇಗೆ ಮಹತ್ವ ಬರುತ್ತದೆ ಅಂತ ಮಜವಾಗಿ ಹೇಳಿದ ಸಿನಿಮಾ. ಯೋಗಿ ಬಾಬು ನಟನೆ ಸಿನಿಮಾದ ಹೈಲೈಟ್. ಅನೇಕ ಕಟು ಸತ್ಯಗಳ ತಮಾಷೆಯಾಗಿ ಹೇಳಿದ ಈ ಸಿನಿಮಾ ಬಹಳ ಚೆನ್ನಾಗಿದೆ. ರೇಟಿಂಗ್ 4/5

cycle (Netflix, marati)- ನೋಡುಗನಲ್ಲಿ ಏಕಕಾಲದಲ್ಲಿ ನಗುವನ್ನೂ,ಬೆಚ್ಚನೆಯ ಭಾವವನ್ನೂ ,ಕಣ್ಣಂಚಿನಲ್ಲಿ ನೀರನ್ನೂ ತರಿಸಬಲ್ಲ ಮನೋಜ್ಞ ಸಿನಿಮಾ. ಒಂದು ಸೈಕಲ್ ಕಳ್ಳತನದ ಸುತ್ತ ಕತೆ ಸಾಗುತ್ತದೆ.ಎಲ್ಲರೂ ಎಷ್ಟು ಒಳ್ಳೆಯವರು ಅನ್ನುವ ಭಾವ ಮೂಡಿಸುವುದೇ ಸಿನಿಮಾದ ಮಿತಿ ಮತ್ತು ಶಕ್ತಿ.ಇದನ್ನು ನೋಡುವಾಗ ನನಗೆ ‘ ಒಂದಲ್ಲಾ ಎರಡಲ್ಲಾ’ ನೆನಪಾಯಿತು. ರೇಟಿಂಗ್ 4/5

Gullak (tvf, Sony liv 2 sessons) ಇದು ನೆನಪುಗಳ ಮೆರವಣಿಗೆ. ಅಪ್ಪ ,ಅಮ್ಮ ಇಬ್ಬರು ಮಕ್ಕಳು ಗಂಡು ಹೈಕ್ಳು. ಅವರ ದಿನನಿತ್ಯದ ಜಗಳ ಪ್ರೀತಿ . ಒಂದ್ಸಲ ಹಾಗೇ ಮಧ್ಯಮ ವರ್ಗದವರೆಲ್ಲ ಬಾಲ್ಯಕ್ಕೆ ಹೋಗಿ ಬಂದಂತಾಗುತ್ತದೆ. ಸರಳವಾಗಿದ್ದು ಖುಷಿ ಕೊಡುತ್ತದೆ. ರೇಟಿಂಗ್ 4/5

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ