ಬಂಟ್ವಾಳ

ಲಾಕ್ ಡೌನ್ ಸಂದರ್ಭ ಅನಗತ್ಯ ಸಂಚಾರ: ಮುಲಾಜಿಲ್ಲದೆ ದಂಡ ವಿಧಿಸಲು ಶಾಸಕ ಸೂಚನೆ

ಬಂಟ್ವಾಳ: ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸಿ ಅನಗತ್ಯ ಸಂಚಾರ ಕುರಿತು ದೂರುಗಳು ಬಂದಿದ್ದು, ಇವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕರು, ಸೋಮವಾರ ನಿಗದಿಪಡಿಸಲಾದ ಅಂಗಡಿಗಳಲ್ಲದೆ ಎಲ್ಲ ಅಂಗಡಿ ಮುಂಗಟ್ಟುಗಳೂ ತೆರವಾದ ಕುರಿತು ದೂರುಗಳು ಬಂದಿವೆ. ಮಂಗಳವಾರವೂ ಇದೇ ರೀತಿ ತೆರೆದಿದ್ದರೆ, ಅವುಗಳ ವಿಡಿಯೋ ರೆಕಾರ್ಡ್ ಮಾಡಿ,  ದಂಡ ವಿಧಿಸುವ ಕ್ರಮ ಜರುಗಿಸಿ, ಅನಗತ್ಯ ವಾಹನ ಸಂಚಾರಿಗಳಿಗೂ ಕಠಿಣ ಕ್ರಮ ಜರುಗಿಸಿ, ಲಾಕ್ ಡೌನ್ ನಿಯಮಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts