ವಿಟ್ಲ ಪೇಟೆಗೆ ಆಗಮಿಸುವ ಎಲ್ಲ ರಸ್ತೆಗಳನ್ನು ಗುರುವಾರ ಪೊಲೀಸರು ಬಂದ್ ಮಾಡಿ ಪಹರೆ ಕಾಯುತ್ತಿದ್ದು, ಅಗತ್ಯವಿಲ್ಲದೆ ಬರುವವರಿಗೆ ದಂಡ ವಿಧಿಸುತ್ತಿದ್ದಾರೆ. ಪೇಟೆಗೆ ಅನಗತ್ಯವಾಗಿ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗುರುವಾರದಿಂದ ನಾಲ್ಕು ರಸ್ತೆಗಳಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನೋದ್ ರೆಡ್ಡಿ ನೇತೃತ್ವದಲ್ಲಿ ನಾಕಾ ಬಂಧಿ ಮಾಡಲಾಗಿದೆ.
ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ, ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿ ನಾಕಾ ಬಂಧಿ ಮಾಡಲಾಗಿದ್ದು, ಪೊಲೀಸರು ತಮ್ಮ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…