ಬಂಟ್ವಾಳ: ಶಿವರಾತ್ರಿ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಭಜನಾ ಸಂಕೀರ್ತನೆಗಳು ವಿಶೇಷ ಪೂಜೆಗಳು ನಡೆದವು. ಕಾರಿಂಜದಲ್ಲಿ ಜಾತ್ರೆ ಸಂಭ್ರಮವಿದ್ದರೆ, ನರಹರಿ ಪರ್ವತ ಸದಾಶಿವ ದೇವಸ್ಥಾನ, ನೆಟ್ಲ ನಿಟಿಲಾಕ್ಷ ಸದಾಶಿವ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪಾಣೆಮಂಗಳೂರಿನ ಭಯಂಕೇಶ್ವರ ರುದ್ರ ದೇವಸ್ಥಾನ, ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ, ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಿತ ಬಂಟ್ವಾಳ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭಕ್ತರು ಆಗಮಿಸಿ ದೇವತಾರ್ಚನೆ ಮಾಡಿದರು. ಈ ಸಂದರ್ಭ ನಂದಾವರ ದೇವಸ್ಥಾನದಲ್ಲಿ ಏಕಾಹ ಭಜನೆಯಲ್ಲಿ ಸುಮಾರು 20ಕ್ಕೂ ಅಧಿಕ ತಂಡಗಳು ಪಾಲ್ಗೊಂಡವು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಸಂಜೆ ಭಜನಾ ಕಾರ್ಯಕ್ರಮವು ಏರ್ಪಾಡಾಗಿತ್ತು,