ಬಂಟ್ವಾಳ: ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲುವಿನಲ್ಲಿ ಅವಧಿ ಮೀರಿದ, ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಟೋಲ್ ಗೇಟ್ ಬಳಿ ಮಂಗಳವಾರ ಧರಣಿ ಪ್ರತಿಭಟನೆ ನಡೆಯಿತು.
ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ತಾಲೂಕು ಸಮಿತಿಯೊಂದಿಗೆ ಸಹಭಾಗಿಯಾಗಿ ವಕೀಲರ ಸಂಘ ಬಂಟ್ವಾಳ, ದ.ಕ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ, ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಚಾಲಕರ ಸಂಘ, ವರ್ತಕರ ಸಂಘ, ನ್ಯಾಯಪರವಾಗಿ ಹೋರಾಡುವ ವಿವಿಧ ಸಂಘಟನೆಗಳು ಪ್ರತಿಭಟನೆ ಆಯೋಜಿಸಿದ್ದವು,
ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ಪ್ರಭಾಕರ ದೈವಗುಡ್ಡೆ ಮಾತನಾಡಿ, ನಾಳೆಯಿಂದ ನಾವು ಟೋಲ್ ಪಾವತಿಸುವುದಿಲ್ಲ ಎಂದರು.ಇದು ಚುನಾಯಿತ ಜನಪ್ರತಿನಿಧಿಯ ಬದ್ಧತೆ ಮತ್ತು ಇಚ್ಛಾಶಕ್ತಿಯ ಕೊರತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ವಕೀಲ ಉಮೇಶ್ ಕುಮಾರ್ ಮಾತನಾಡಿ, ಬ್ರಹ್ಮರಕೊಟ್ಲು ಟೋಲ್ ಗೇಟ್ ಅವೈಜ್ಞಾನಿಕವಾಗಿದ್ದು ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತಿಸಲಾಗುವುದು ಎಂದರು.
ಸಮಾನ ಮನಸ್ಕ ಸಂಘಟನೆಯ ಸಮನ್ವಯ ಸಮಿತಿ ಕಾರ್ಯದರ್ಶಿ ಬಿ.ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳಾದ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಗ್ರಾಪಂ ಅಧ್ಯಕ್ಷ ಪ್ರವೀಣ್ ತುಂಬೆ, ಸುಭಾಶ್ಚಂದ್ರ ಜೈನ್, ಅಣ್ಣು ಪೂಜಾರಿ, ಎಂ.ಎಚ್.ಮುಸ್ತಫ, ರಾಮಣ್ಣ ವಿಟ್ಲ, ಮೋಹನ್ ಗೌಡ ಕಲ್ಮಂಜ, ರಾಜಾ ಚಂಡ್ತಿಮಾರ್, ಬೇಬಿ ಕುಂದರ್ ಮೊದಲಾದವರು ಮಾತನಾಡಿದರು. ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪ್ರಕಾಶ್ ಶೆಟ್ಟಿ ತುಂಬೆ, ಜಗನ್ನಾಥ ಬಂಟ್ವಾಳ, ಸುದೀಪ್ ಶೆಟ್ಟಿ, ಹಾರುನ್ ರಶೀದ್, ಶರೀಫ್ ಮದ್ವ, ಇಬ್ರಾಹಿಂ ಶಂಭೂರು, ಸದಾಶಿವ ಬಂಗೇರ, ಪ್ರೇಮನಾಥ ಕೆ, ಮ್ಯಾಕ್ಸಿಂ ಕುಕ್ಕಾಜೆ, ಅಬ್ಬಾಸ್ ಹಾಲಿ, ಮಹಮ್ಮದ್ ನಂದಾವರ, ಲೋಲಾಕ್ಷ ಶೆಟ್ಟಿ, ಮಧುಸೂದನ, ಸುರೇಶ್ ಬಂಗೇರ, ಸುರೇಶ್ ಕುಲಾಲ್, ಶ್ರೀನಿವಾಸ ಭಂಡಾರಿ, ಇಸ್ಮಾಯಿಲ್ ಅರಬಿ ನೇತೃತ್ವ ವಹಿಸಿದ್ದರು. ಸುರೇಶ್ ಕುಮಾರ್ ಬಂಟ್ವಾಳ್ ನಿರೂಪಿಸಿದರು. ಪ್ರೇಮನಾಥ ಕೆ. ವಂದಿಸಿದರು.