ವಾಮದಪದವು: ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಆಲದಪದವು- ವಾಮದಪದವು ಇದರ ನೂತನ ಅಧ್ಯಕ್ಷರಾಗಿ ಚೇತನ್ ಕುಮಾರ್ ಕುದ್ಕಂದೋಡಿ ಆಯ್ಕೆಯಾಗಿದ್ದಾರೆ.
ಸಂಘದ ಕಟ್ಟಡದಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಿಶೋರ್ ಕುಮಾರ್ ನಾಯರ್ ಕುಮೇರು, ಸಂದೀಪ್ ಪೂಜಾರಿ ಗಂಟೆರಬೆಟ್ಟು, ಎಂ. ಪಿ. ಶೇಖರ್ ಮೇಲ್ಪೆತ್ತರ, ಶೇಖರ ಪೂಜಾರಿ ಅಗಲ್ದೋಡಿ, ಲೋಕನಾಥ ಪೂಜಾರಿ ದುಗುರೊಟ್ಟು, ಕಿರಣ್ ಪೂಜಾರಿ ಎರ್ಮೆನಾಡು, ಶೇಖರ ಪೂಜಾರಿ ಪೆಜಕ್ಕಳ, ಸೀತಾರಾಮ ಪೂಜಾರಿ ಕೊಪ್ಪಳ, ಪ್ರಭಾಕರ ಪೂಜಾರಿ ಅಂತರ ಗುತ್ತು, ಶಿವರಾಮ ಪೂಜಾರಿ ಮಾವಿನಕಟ್ಟೆ, ನಾರಾಯಣ ಪೂಜಾರಿ ಕಲಾಬಾಗಿಲು, ಶ್ರೀನಿವಾಸ ಪೂಜಾರಿ ವಾಮದಪದವು, ವಾರಿಜಾ ಪೆಜಕ್ಕಳ, ಪುಷ್ಪಾವತಿ ವಿಶ್ವನಾಥ್ ಪೂಜಾರಿ ವಾಮದಪದವು ಉಪಾಧ್ಯಕ್ಷರುಗಳಾಗಿ, ವಿ.ಚಂದಪ್ಪ ಪೂಜಾರಿ ಪ್ರಧಾನ ಕಾರ್ಯದರ್ಶಿಯಾಗಿ, ದಿವಾಕರ ಪೂಜಾರಿ ಉರುಡಾಯಿ ಕೋಶಾಧಿಕಾರಿಯಾಗಿ, ಮಾಧವ ಸುವರ್ಣ ಚೆನ್ನೈತ್ತೋಡಿ ಮತ್ತು ಕೀರ್ತನ್ ಕುಮಾರ್ ಕುದ್ಕಂದೋಡಿ ಕಾರ್ಯದರ್ಶಿಗಳಾಗಿ, ವೇದಕೃಷ್ಣ ಪೂಜಾರಿ ಆಲದಪದವು ಮತ್ತು ದಯಾನಂದ ಪೂಜಾರಿ ಪೂರೊಟ್ಟು ಜತೆಕಾರ್ಯದರ್ಶಿಗಳಾಗಿ ಆಯ್ಕೆಯಾದರು. ಬಾಬು ಪೂಜಾರಿ ಕೌಡೋಡಿಗುತ್ತು, ಮೋನಪ್ಪ ಪೂಜಾರಿ ಪಾಲೆದಡಿ, ಅಣ್ಣಿ ಪೂಜಾರಿ ಬೆಟ್ಟುಗದ್ದೆ, ಡೊಂಬಯ ಪೂಜಾರಿ ಪಿಲಿಮೊಗರು, ಬೂಬ ಪೂಜಾರಿ ಮಾಳಿಗೆಮನೆ, ಉಷಾ ಇಂದು ಶೇಖರ್ ಚೆನ್ನೈತ್ತೋಡಿ ಅವರನ್ನು ಗೌರವಾಧ್ಯಕ್ಷರುಗಳನ್ನಾಗಿ ಆರಿಸಲಾಯಿತು. ಸಂಘದ ವ್ಯಾಪ್ತಿಯ ಪ್ರತೀ ಗ್ರಾಮವಾರು ಸಂಘಟನಾ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
IFTAAR ORGANISED BY FORMER MINISTER RAMANATHA RAI AT PANEMANGALORE (more…)