ಬಂಟ್ವಾಳ: ಜೋಡುಮಾರ್ಗ ಜೇಸಿ ನೇತ್ರಾವತಿಯಿಂದ ಬಾಳ್ತಿಲದ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕನ್ಯಾನದ ಭಾರತ ಸೇವಾಶ್ರಮ ಸಹಯೋಗದೊಂದಿಗೆ ಸೋಮವಾರ ಕನ್ಯಾನದ ಭಾರತ ಸೇವಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಸಲಾಯಿತು.
ಭಾರತ ಸೇವಾಶ್ರಮದ ಸರಿತಾ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಜೇಸಿ ಅಧ್ಯಕ್ಷೆ, ನ್ಯಾಯವಾದಿ ಹಾಗೂ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ ಶೈಲಜಾ ರಾಜೇಶ್ ಅವರು ಮಹಿಳಾ ಸಶಕ್ತೀಕರಣ, ಆತ್ಮರಕ್ಷಣೆ, ದೌರ್ಜನ್ಯ ತಡೆ ಕಾಯ್ದೆ, ಮಹಿಳಾ ಹಕ್ಕು ಮತ್ತು ಕಾನೂನು ಮಾಹಿತಿ ನೀಡಿದರು.
ಈ ಸಂದರ್ಭ ಮಾಜಿ ಸೈನಿಕರ ಪತ್ನಿ ಪ್ರಮೀಳಾ, ಸಮಾಜ ಸೇವಕಿ ಸರಿತಾ ಈಶ್ವರ ಭಟ್, ಕಾರ್ಮಿಕರಾದ ಲಲಿತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಭಾರತ ಸೇವಾಶ್ರಮ ವತಿಯಿಂದ ಜೇಸಿಐ ಅಧ್ಯಕ್ಷೆ ಶೈಲಜಾ ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಜೇಸಿ ಕಾರ್ಯದರ್ಶಿ ಮಲ್ಲಿಕಾ ಆಳ್ವಾ,ಸದಸ್ಯರಾದ ರಮ್ಯಾ, ಪಲ್ಲವಿ , ಅನ್ನಪೂರ್ಣ , ಭಾರತ ಸೇವಾಶ್ರಮದ ಈಶ್ವರ ಭಟ್ ಮತ್ತು ಪರಶುರಾಮ್ ಉಪಸ್ಥಿತರಿದ್ದರು.