ಮಹಿಳೆಯರು ಮಾನಸಿಕ ಒತ್ತಡದಿಂದ ವಿಮುಕ್ತರಾಗುವ ಮೂಲಕ ಮಹಿಳಾ ಸಬಲೀಕರಣ ಸಾದ್ಯ:ಡಾ: ಸೀಮಾ ಸುದೀಪ್
ಬಂಟ್ವಾಳ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಂಗಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಮಹಿಳಾ ಗ್ರಾಮಸಭೆ ನಡೆಯಿತು. ಮಾನಸಿಕ ಒತ್ತಡದಿಂದ ಮಹಿಳೆಯರು ವಿಮುಕ್ತರಾಗುವ ಮೂಲಕ ಮಹಿಳಾ ಸಬಲೀಕರಣ ಸಾಧ್ಯ ಎಂದು ಈ ಸಂದರ್ಭ ಸಿದ್ದಕಟ್ಟೆಯ ಅನಂತ ಪದ್ಮಾ ಹೆಲ್ತ್ ಸೆಂಟರ್ ನ ವೈದ್ಯೆ ಡಾ. ಸೀಮಾ ಸುದೀಪ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ವಿಮಲ ಮೋಹನ್ ಮಾತನಾಡಿ ಮಹಿಳೆಯರು ಕೀಳರಿಮೆ ಬಿಟ್ಟು ಸಮಾಜದಲ್ಲಿ ಮುಂಚೂಣಿ ಪಾತ್ರ ವಹಿಸಬೇಕು ಎಂದು ಶುಭ ಕೋರಿದರು. ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ನಿರ್ದೇಶಕಿ ಮಂದಾರತಿ ಶೆಟ್ಟಿ, ಮಹಿಳಾ ಸಂಘದ ಡೆಲ್ಸಿ ಜ್ಯೋತಿ ಡಿ’ಕೊಸ್ತ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಅಧ್ಯಕ್ಷ ಮೈಕಲ್ ಡಿ’ಕೋಸ್ತ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಕೋಟ್ಯಪ್ಪ ಪೂಜಾರಿ, ಹೇಮಲತಾ, ಶಕುಂತಲಾ, ಬೆನಡಿಕ್ಟ ಡಿ’ಕೊಸ್ತ, ಶಾರದಾ, ಪ್ರೇಮ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಯ ಸದಸ್ಯರಾದ ಮೋಹನ್ ಜಿ.ಮೂಲ್ಯ,ಎಚ್.ಎ.ರಹಿಮಾನ್ ಹಾಗೂ ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತೆಯ , ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು,ಊರಿನ ಮಹಿಳೆಯರು ಭಾಗವಹಿಸಿದ್ದರು.ಸಂಗಬೆಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶೋಭಾ ಸ್ವಾಗತಿಸಿ, ವಂದಿಸಿದರು.ಗ್ರಾಮ ಪಂಚಾಯತ್ ಕಾರ್ಯದರ್ಶಿ ರೋಹಿಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.