ಬಂಟ್ವಾಳ: ಬಂಟ್ವಾಳದ ಕಾಮಾಜೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಬೆಂಜನಪದವಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕರಾದ ಬಾಲಕೃಷ್ಣ ಎನ್. ವಿ ಕಾರ್ಯಕ್ರಮ ಉದ್ಘಾಟಿಸಿ ರಾಷ್ಟೀಯ ಸೇವಾ ಯೋಜನೆ ಅನುಭವ ಆಧಾರಿತ ಶಿಕ್ಷಣ ನೀಡುತ್ತದೆ, ವಿದ್ಯಾರ್ಥಿಗಳಿಗೆ ಸೇವೆ, ಮತ್ತು ಸಮಾಜಮುಖಿ ಚಿಂತನೆಯ ಪರಿಚಯ ಮಾಡಿ ಅವರಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ ಎಂದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್.ನಲ್ಲಿ ತಮ್ಮ ಅನುಭವಗಳನ್ನು ತಿಳಿಸಿದರು. ಎನ್.ಎಸ್.ಎಸ್.ಯೋಜನಾಧಿಕಾರಿ ಪ್ರೊ. ಹೈದರಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಾವತಿ ಕಾರ್ಯಕ್ರಮ ನಿರ್ವಹಿಸಿದರು. ತನುಶ್ರೀ ವಂದಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕರಾದ ಗಾಡ್ವಿನ್ ಮತ್ತು ಲಾವಣ್ಯ ಉಪಸ್ಥಿತರಿದ್ದರು.