ಬಂಟ್ವಾಳ

ಮಾರ್ಚ್ 7 ರಂದು ಟೈಲರ್ಸ್ ಎಸೋಸಿಯೇಶನ್ ಸಂಸ್ಥಾಪನಾ ದಿನಾಚರಣೆ, ಹೊಲಿಗೆ ಯಂತ್ರ ವಿತರಣೆ

ಬಂಟ್ವಾಳ: ಕರ್ನಾಟಕ ಟೈಲರ್ಸ್ ಎಸೋಸಿಯೇಶನ್ (ರಿ) ಮಂಗಳೂರು.ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸಂಸ್ಥಾಪನ ದಿನಾಚರಣೆ ಅಂಗವಾಗಿ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಕೆ.ಎಸ್.ಟಿ.ಎ  ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ರ ಭಾನುವಾರ ಬೆಳಗ್ಗೆ ಸ್ಪರ್ಶಾ ಕಲಾ ಮಂದಿರ ಬಿ.ಸಿ. ರೋಡು ಇಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಸುರೇಶ್ ಸಾಲ್ಯಾನ್ ರಾಜ್ಯ ಉಪಾಧ್ಯಕ್ಷರು ಮತ್ತು ಸಂಚಾಲಕರು ಕಟ್ಟಡ ಸಮಿತಿ ಕೆ. ಎಸ್.ಟಿ .ಎ, ಮುಹಮ್ಮದ್ ಶರೀಫ್ ಅಧ್ಯಕ್ಷರು ಪುರಸಭೆ ಬಂಟ್ವಾಳ, ಡಾ. ಗೋಪಾಲಕೃಷ್ಣ  ಆಚಾರ್ಯ ಮಾಲಕರು,ಬಜಾರ್ ಸಮೂಹ ಸಂಸ್ಥೆಗಳು ಹಾಗೂ ಫ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತರು, ಸುಂದರ ಪೂಜಾರಿ ಬೊಳಂಗಡಿ ಅಧ್ಯಕ್ಷರು, ಯುವವಾಹಿನಿ ಬಂಟ್ವಾಳ  ತಾಲೂಕು ಘಟಕ, ಸುಭಾಶ್ಚಂದ್ರ ಜೈನ್ ಅಧ್ಯಕ್ಷರು, ವರ್ತಕರ ವಿ.ಸ.ಸಂಘ (ನಿ), ಶ್ರೀ ಜನಾರ್ಧನ ಟೈಲರ್ ಬೊಂಡಾಲ ನಿರ್ದೇಶಕರು, ಸುಮಾಜ ಸೇವಾ ಸಹಕಾರಿ ಬ್ಯಾಂಕ್, ಪುರುಷೋತ್ತಮ ಎಸ್.ಮಾಣಿಮಜಲು ಗ್ರಾಮ ಪಂಚಾಯತ್ ಸದಸ್ಯರು ನರಿಕೊಂಬು,ಮತ್ತು ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಟಿ.ಎ ಬಂಟ್ವಾಳ ಭಾಗವಹಿಸಲಿದ್ದಾರೆ ಎಂದು ಎಂ.ನಾಗೇಶ್ ಪ್ರಧಾನ ಕಾರ್ಯದರ್ಶಿ,ಯಾದೇಶ್ ತುಂಬೆ ಕೋಶಾಧಿಕಾರಿ, ಶ್ರೀ ಈಶ್ವರ ಕುಲಾಲ್ ಅಧ್ಯಕ್ಷರು ಕ್ಷೇತ್ರ ಸಮಿತಿ ಮತ್ತು ವಲಯ ಸಮಿತಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೆ.ಎಸ್.ಟಿ.ಎ ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ