ಬಂಟ್ವಾಳ: ನೇಪಾಳದಲ್ಲಿ ನಡೆದ ಜುಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಕಲ್ಲಡ್ಕದ ಯುವ ಪ್ರತಿಭೆಗಳಾದ ನಿಶ್ಚಿತ್ ಕುಮಾರ್ ಮತ್ತು ಧನಂಜಯ ಬಾಳ್ತಿಲ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿಗಳಾಗಿರುವ ಇಬ್ಬರನ್ನು ಅಭಿನಂದಿಸಿ ಮಾತನಾಡಿದ ರಾಜ್ಯ ಒಳಚರಂಡಿ ಮಂಡಳಿಯ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್ ಮತ್ತು ಬಿಜೆಪಿ ನಾಯಕ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಯುವಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ. ಗ್ರಾಮೀಣ ಪ್ರದೇಶದ ಈ ಯುವಕರು ಕಲ್ಲಡ್ಕದ ಕೀರ್ತಿಯನ್ನು ದೇಶದಲ್ಲಿ ಬೆಳಗಿಸುವಂತ ಸಾಧನೆಯನ್ನು ಮಾಡಿದ್ದಾರೆ ಎಂದು ಶುಭ ಹಾರೈಸಿದರು. ಪ್ರಮುಖರಾದ ಯತಿನ್ ಕುಮಾರ್ ಏಳ್ತಿಮಾರ್, ಮಂತ್ರದೇವತಾ ದೈವಸ್ಥಾನದ ಮುಖ್ಯಸ್ಥ ಮನೋಜ್ ಕಟ್ಟೆಮಾರ್, ಬಾಳ್ತಿಲ ಗ್ರಾಪಂ ಅಧ್ಯಕ್ಷರಾದ ಹಿರಣ್ಮಯಿ, ಬೈದರಡ್ಕ ಪ್ರಭಾಕರ ಶೆಟ್ಟಿ, ಜಿನ್ನಪ್ಪ, ವಜ್ರನಾಥ ಮಾಡ್ಲಮಜಲು, ಸುಂದರ ಪೂಜಾರಿ ನರಹರಿನಗರ, ನಿಶ್ಚಿತ್ ಪೂಜಾರಿ ಅವರ ತಂದೆ ತಾಯಿಗಳಾದ ಸೀತಾರಾಮ ಪೂಜಾರಿ ಮತ್ತು ಸುಶೀಲಾ, ಧನಂಜಯ ಅವರ ತಂದೆ ತಾಯಿಗಳಾದ ಚಂದ್ರಹಾಸ ದಾಸ್ ಮತ್ತು ಜಲಜಾಕ್ಷಿ, ಗ್ರಾಪಂ ಸದಸ್ಯರಾದ ಗೋಪಾಲಕೃಷ್ಣ ಪೂವಳ, ಪವಿತ್ರ ಗೋಪಾಲ್ ಬಜಾರ್, ಹಿರಿಯರಾದ ಡೊಂಬಯ್ಯ ಟೈಲರ್, ಚಿದಾನಂದ ಆಚಾರ್ಯ, ವಸಂತ ಬಟ್ಟೆ ಹಿತ್ತಲು, ನವೀನ್ ಕೊಟ್ಟಾರಿ, ಚಿದಾನಂದ ರಾಯಪ್ಪಕೊಡಿ, ಬಾಲಕೃಷ್ಣ ಕೊಟ್ಟಾರಿ, ಶ್ರೀಧರ್ ಸುವರ್ಣ ಹಾಗೂ ಶಾರದೋತ್ಸವ ಸಮಿತಿ ಅಧ್ಯಕ್ಷರು ಸರ್ವ ಸದಸ್ಯರು, ತ್ರಿಶೂಲ್ ಫ್ರೆಂಡ್ಸ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದ್ರು. ಗೋಪಾಲ್ ಬಲ್ಯಾಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು