ಸುದ್ದಿಗಳು

ಆಕಾಶವಾಣಿ – ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ಮಾಧ್ಯಮ : ಚಂದ್ರಶೇಖರ್ ಶೆಟ್ಟಿ

ಮೂಡುಬಿದಿರೆ: “ಆಕಾಶವಾಣಿಯು ಸಮಾಜದಲ್ಲಿ ಬೆರೆತು, ಆಯಾ ಪ್ರದೇಶದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿ ಜನರಿಗೆ ಹತ್ತಿರವಾಗಿದೆ” ಎಂದು ಆಕಾಶವಾಣಿ ಹಾಗೂ ದೂರದರ್ಶನದ ಇಂಜಿನಿಯರ್‌ಗಳ ನೌಕರರ ಸಂಘದ ವಕ್ತಾರ ಚಂದ್ರಶೇಖರ್ ಶೆಟ್ಟಿ ಹೇಳಿದರು.

“ವಿಶ್ವ ರೇಡಿಯೋ ದಿನದ” ಪ್ರಯುಕ್ತ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದವು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ರೇಡಿಯೋ- ಎನ್ ಎವರ್‌ಗ್ರೀನ್ ಆಡಿಯೋ” – ವಿಷಯದ ಬಗ್ಗೆ ಮಾತನಾಡಿದ ಅವರು, “ಕಾಲಕ್ಕೆ ತಕ್ಕಂತೆ ರೇಡಿಯೋ ಸಹ ಬದಲಾಗುತ್ತಿದೆ. ಈ ಇಂಟರ್ನೆಟ್ ಯುಗದಲ್ಲಿ ರೇಡಿಯೋ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಹೊರ ದೇಶದ ಸ್ಟೇಷನ್‌ಗಳನ್ನೂ ನಾವು ನಮ್ಮ ಮನೆಯಲ್ಲೆ ಕುಳಿತು ಕೇಳಬಹುದಾಗಿದೆ” ಎಂದರು.

ರೇಡಿಯೋ ನಡೆದು ಬಂದ ದಾರಿಯನ್ನು ವಿವರಿಸಿದ ಅವರು, ರೇಡಿಯೋ ಪ್ರಾರಂಭವಾದ ಕಾಲಘಟ್ಟದಲ್ಲಿ ಬಳಸುತ್ತಿದ್ದ ಸಾಧನಗಳಾದ ಅಲ್ಟ್ರಪೋರ್ಟೆಬಲ್ ರೇಕಾರ್ಡ್ ಪ್ಲೇಯರ್, ಸ್ಟೂಡರ್, ಎಲ್‌ಪಿ ಪ್ಲೇಯರ್, ವಾಲ್ವ್‌ಗಳನ್ನು ತೋರಿಸಿ ವಿವರಿಸಿದರು.

ಕಾರ‍್ಯಕ್ರಮದಲ್ಲಿ  ಆಳ್ವಾಸ್ ಮ್ಯೂಸಿಯಂನ ಸಂಯೋಜಕ ಶ್ರೀಕರ ಭಂಡಾರ್ಕರ್, ಮಂಗಳೂರು ಆಕಾಶವಾಣಿಯ ಬ್ರಾಡ್‌ಕಾಸ್ಟ್ ಇಂಜಿನಿಯರ್  ಮೊಹಮ್ಮದ್ ಶನಾಝ್ ಕೆ,  ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕಿ ಡಾ ಸಫಿಯಾ ಉಪಸ್ಥಿತರಿದ್ದರು. ಪ್ರಥ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

NEWSDESK